ಕಲಿಸಿದ ಗುರುಗಳನ್ನು ಗೌರವದಿಂದ ಕಾಣಲಿ

ಕೊಕಟನೂರ ಗ್ರಾಮದಲ್ಲಿ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ ಉದ್ಘಾಟಿಸಿದರು. ಮರುಳಸಿದ್ಧ ಸ್ವಾಮೀಜಿ, ಶ್ಯಾಮರಾವ ಪೂಜಾರಿ, ಭಾರತಿ ಕುಲಕರ್ಣಿ ಇತರರಿದ್ದರು.
ಕೊಕಟನೂರ ಗ್ರಾಮದಲ್ಲಿ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ ಉದ್ಘಾಟಿಸಿದರು. ಮರುಳಸಿದ್ಧ ಸ್ವಾಮೀಜಿ, ಶ್ಯಾಮರಾವ ಪೂಜಾರಿ, ಭಾರತಿ ಕುಲಕರ್ಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಅಭಿನುಡಿ
  • ಸ್ನೇಹ ಸಮ್ಮಿಲನ, ಗುರುವಂದನಾ ಸಮಾರಂಭ
ಅಥಣಿ ಗ್ರಾಮೀಣ: ಪ್ರಾಥಮಿಕ ಹಾಗೂ ಪ್ರೌಢಶಾಲೆ ಗುರುಗಳು, ಗೆಳೆಯರೊಂದಿಗೆ ಕಳೆದ ದಿನಗಳು, ಹರಟೆ, ಜಗಳ, ಕಿತಾಪತಿ, ಆಟೋಟ, ತರಲೆಗಳು ಜೀವನ ಪರ್ಯಂತ ನೆನಪಿನಲ್ಲಿರುತ್ತವೆ ಎಂದು ಅಥಣಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ೧೯೮೧ರಿಂದ ೧೯೯೧ರವರೆಗಿನ ೧೦ನೇ ತರಗತಿ ಹಿರಿಯ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಂದೆ-ತಾಯಿಯನ್ನು ಪ್ರೀತಿಯಿಂದ ಸಲುಹಬೇಕು. ಕಲಿಸಿದ ಗುರುಗಳು ಕಂಡಲ್ಲಿ ಗೌರವದಿಂದ ಮಾತನಾಡಿಸಿ ಯೋಗಕ್ಷೇಮ ವಿಚಾರಿಸಬೇಕು. ೪೦ ವರ್ಷಗಳ ಬಳಿಕ ಸ್ನೇಹಿತರು, ಗುರುಗಳು ಸೇರಿ ಕಾರ್ಯಕ್ರಮ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ ಮಾತನಾಡಿ, ಈ ಮೊದಲಿನ ಶಿಕ್ಷಣಕ್ಕೂ ಈಗಿರುವ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಡಿಜಿಟಲ್, ಎಐ ಆಧಾರಿತ ಶಿಕ್ಷಣದಲ್ಲಿ ಗುರು-ಶಿಷ್ಯರ ಸಂಬಂಧ ಮರೀಚಿಕೆಯಾಗಿದೆ ಎಂದರು.
ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿ, ಶಿಕ್ಷಕರು ಕೊಟ್ಟ ಚಾಟಿ ಏಟು, ತಿದ್ದಿ ಬುದ್ಧಿ ಹೇಳಿದ ಆ ದಿನಗಳು ನಮನ್ನಿಂದು ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸಿವೆ ಎಂದರು.
ಹಿರಿಯ ವಿದ್ಯಾರ್ಥಿಗಳಾದ ವೀರಭದ್ರ ಮಂಟೂರ, ಭಾರತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಶಶಿಕಾಂತ ಕುಲಕರ್ಣಿ, ಎಂ.ಆರ್.ಹಲಗಿ, ಪಿ.ವಿ.ಜಾಧವ, ಭಾರತಿ ಯಲಬಳ್ಳಿ, ಎಂ.ಎಚ್.ಜಮಖಂಡಿ ಅವರನ್ನು ಸನ್ಮಾನಿಸಲಾಯಿತು.
ಪಾರೀಸ್ ಯಲಿಗೌಡರ, ವಿಶಾಲ ದೇಸಾಯಿ, ಗುರುಮೂರ್ತಯ್ಯ ಕಾಡದೇವರಮಠ, ಎಲ್.ಬಿ. ಲಮಾಣಿ, ಎಸ್.ಎಲ್.ಸವದಿ, ಶಿವಗೌಡ ನೇಮಗೌಡ, ಶಿವಗೌಡ ನೇಮಗೌಡ, ಶ್ರೀಶೈಲ ಶರಣ, ಭೀಮಸೇನ ಪಾಟಣಕರ, ಪರಶುರಾಮ ಚೌಹಾಣ, ಸಾರಾಮತಿ ದಡ್ಡಿ, ನೀಲಮ್ಮ ಪೂಜಾರಿ, ಚಂಪಾ ಪನಸಾರ, ಶಾಂತಾ ಮಗರ, ಕಸ್ತೂರಿ ಕುಂಬಾರ ಇತರರಿದ್ದರು. ರೂಪಾ ದೇಸಾಯಿ, ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಜಯಶ್ರೀ ಮಂಟೂರ ಸ್ವಾಗತಿಸಿದರು. ಧರೆಪ್ಪ ನಾವಿ ನಿರೂಪಿಸಿದರು. ಯಶೋಧಾ ಮಗರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net