ವಿದ್ಯಾರ್ಥಿಗಳು ಪ್ರೇರಣೆಯಾಗಲಿ

ಸಂಕೇಶ್ವರ ಪಟ್ಟಣದ ಎಸ್‌ಡಿವಿಎಸ್ ಸಂಘದ ಆಡಳಿತ ಕಚೇರಿಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಬಿ.ಪಾಟೀಲ, ಕೆ.ಸಿ.ಶಿರಕೋಳಿ, ವಿ.ಬಿ.ತೋಡಕರ ಇತರರಿದ್ದರು.
ಸಂಕೇಶ್ವರ ಪಟ್ಟಣದ ಎಸ್‌ಡಿವಿಎಸ್ ಸಂಘದ ಆಡಳಿತ ಕಚೇರಿಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಬಿ.ಪಾಟೀಲ, ಕೆ.ಸಿ.ಶಿರಕೋಳಿ, ವಿ.ಬಿ.ತೋಡಕರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎ.ಬಿ.ಪಾಟೀಲ ಆಶಯ
  • ಸಾಧಕರಿಗೆ ಸನ್ಮಾನ
ಸಂಕೇಶ್ವರ: ಎಸ್‌ಡಿವಿಎಸ್ ಸಂಘದ ಎಸ್‌ಎಸ್ ಕಲಾ ಮತ್ತು ಟಿಪಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆಗೈದು ಚಿನ್ನದ ಪದಕ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಎಸ್‌ಡಿವಿಎಸ್ ಸಂಘದ ಆಡಳಿತ ಕಚೇರಿಯಲ್ಲಿ ಸೋಮವಾರ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ವಿದ್ಯಾರ್ಥಿಗಳ ಶ್ರಮ, ಪ್ರತಿಭೆ ಮೂಲಕ ಸಂಸ್ಥೆಗೆ ವಿಶೇಷ ಗೌರವ ತಂದುಕೊಟ್ಟಿದ್ದು, ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಬೇಕು. ಪ್ರತಿಭೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯ ಮಾರ್ಗದರ್ಶನ, ಸಹಕಾರ ನೀಡುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಇಂಗ್ಲಿಷ್ ವಿಷಯದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಮುಶಬ್ದರೀನ್ ಕಡಲಗಿ ಮಾತನಾಡಿ, ಸಾಧನೆಗೆ ಪಾಲಕರ ಜತೆ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಕೆ.ಬಿ.ಮರಾಠೆ ಸೇರಿ ಎಲ್ಲ ಉಪನ್ಯಾಸಕರು ಸಹಕಾರ ನೀಡಿದ್ದಾರೆ ಎಂದರು.
ವಿಶ್ವವಿದ್ಯಾಲಯದ ೯ನೇ ಅಂತರ್ ಮಹಾವಿದ್ಯಾಲಯ ಕ್ರೀಡಾಕೂಟದ ವಿವಿಧ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಾದ ಪ್ರೀಯಾ ಪಾಟೀಲ (೫೦೦೦ ಮೀ. ಮತ್ತು ೧೦೦೦೦ ಮೀ. ಓಟದಲ್ಲಿ ಎರಡು ಚಿನ್ನದ ಪದಕ), ರೋಹಿಣಿ ದುರದುಂಡಿ (೧೦೦೦೦ ಮೀ. ಮತ್ತು ೧೫೦೦ ಮೀ. ಓಟದಲ್ಲಿ ಬೆಳ್ಳಿಯ ಪದಕ), ನೂರಜಹಾನ್ ಮುಜಾವರ (೧೫೦೦ ಮೀ. ಓಟದಲ್ಲಿ ಚಿನ್ನ ಮತ್ತು ೫೦೦೦ ಮೀ. ಓಟದಲ್ಲಿ ಬೆಳ್ಳಿ ಪದಕ) ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಕೆ.ಸಿ.ಶಿರಕೋಳಿ, ನಿರ್ದೇಶಕ ವಿ.ಬಿ.ತೋಡಕರ, ಎಸ್.ಎಂ.ಪಾಟೀಲ, ಕಾರ್ಯದರ್ಶಿ ಜಿ.ಸಿ.ಕೋಟಗಿ, ಆಡಳಿತಾಧಿಕಾರಿ ಡಾ.ಬಿ.ಎ.ಪೂಜಾರಿ, ಆರ್.ಬಿ. ಪಾಟೀಲ, ಬಾಳಾಸಾಹೇಬ ವೈರಾಗಿ, ಪ್ರಾಂಶುಪಾಲ ಪಿ.ಬಿ.ಬುರ್ಜಿ, ಸಂಯೋಜಕ ಎಂ.ಆರ್.ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net