ವಿದ್ಯಾರ್ಥಿಗಳ ಕೌಶಲ ಸದ್ಬಳಕೆಯಾಗಲಿ

ರಾಯಬಾಗ ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕ ಅನಂತ ಅಥಣಿ ಅವರನ್ನು ಸತ್ಕರಿಸಲಾಯಿತು. ಎಸ್.ಆರ್.ನೇರ್ಲಿಕರ, ಸಂಗಮನಾಥ ಜಮಾದಾರ ಇತರರಿದ್ದರು.
ರಾಯಬಾಗ ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕ ಅನಂತ ಅಥಣಿ ಅವರನ್ನು ಸತ್ಕರಿಸಲಾಯಿತು. ಎಸ್.ಆರ್.ನೇರ್ಲಿಕರ, ಸಂಗಮನಾಥ ಜಮಾದಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಅನಂತ ಅಥಣಿ ಆಶಯ
  • ಸ್ನೇಹ ಸಮ್ಮೇಳನ, ಬೀಳ್ಕೊಡುಗೆ ಸಮಾರಂಭ
ರಾಯಬಾಗ: ಪ್ರತಿ ವಿದ್ಯಾರ್ಥಿಯಲ್ಲಿ ಅಡಗಿರುವ ಕೌಶಲ ಸೂಕ್ತ ಸಮಯದಲ್ಲಿ ಬಳಕೆಯಾದಾಗ ಮಾತ್ರ ಜೀವನದಲ್ಲಿ ಬದಲಾವಣೆ ಕಾಣುತ್ತೇವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಅನಂತ ಅಥಣಿ ಹೇಳಿದರು.
ರಾಯಬಾಗದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿರುವ ಈ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಎಸ್.ಆರ್.ನೇರ್ಲಿಕರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ೧೯೮೪ರಲ್ಲಿ ಶಿಕ್ಷಣ ಪ್ರೇಮಿ ವಸಂತರಾವ ಪಾಟೀಲ ಈ ಕಾಲೇಜು ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಎಂದರು.
ರೇಣುಕಾ ಶುಗರ್ಸ್ ಜನರಲ್ ಮ್ಯಾನೇಜರ್ ಸಂಗಮನಾಥ ಜಮಾದಾರ, ಎಜಿಎಂ ಎಚ್.ಆರ್.ಸಂಜಯ ಕಿಲ್ಲೇದಾರ, ಕೇನ್ ಮ್ಯಾನೇಜರ್ ವಿರೂಪಾಕ್ಷ ಕರಲಿಂಗನವರ, ಪ್ರಾಚಾರ್ಯ ಬಿ.ಎಸ್. ದಡ್ಡಿ, ಸಾಂಸ್ಕೃತಿಕ ಅಧ್ಯಕ್ಷ ಮಲ್ಲಿಕಾರ್ಜುನ ಜೇಡರ, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಉಪನ್ಯಾಸಕ ರಾಜನ್ ಅನ್ವೇಕರ ಸ್ವಾಗತಿಸಿದರು. ಉಪನ್ಯಾಸಕ ಚಂದ್ರಕಾಂತ ಒಡೆಯರ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net