

ಟ್ರಾೃಕ್ಟರ್ ಸೌಂಡ್ ಸಿಸ್ಟಮ್ ಅಳವಡಿಕೆಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಬ್ಬಿನ ಹಂಗಾಮು ಆರಂಭಗೊಂಡಾಗಿನಿಂದ ಈವರೆಗೆ 332 ಸೌಂಡ್ ಸಿಸ್ಟಮ್ ವಶಪಡಿಸಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 888 ಜಾಗೃತಿ ಅಭಿಯಾನ ಮಾಡಿ, ಚಾಲಕರಿಗೆ ತಿಳಿ ಹೇಳಿದ್ದೇವೆ. ಸಾರ್ವಜನಿಕರಿಗೆ ಸೌಂಡ್ ಸಿಸ್ಟಮ್‌ಗಳಿಂದ ತೊಂದರೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಲು ಎಲ್ಲ ಠಾಣೆಗಳಿಗೂ ಸೂಚಿಸಿದ್ದೇವೆ.