ದೇವದಾಸಿ ಪದ್ಧತಿ ನಿರ್ಮೂಲನೆಯಾಗಲಿ

ಕೊಕಟನೂರಿನಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ಪದ್ಧತಿ ನಿರ್ಮೂಲನೆ ಜಾಗೃತಿ ಜಾಥಾದಲ್ಲಿ ಡಾ.ಸವಿತಾ ಪೂಜಾರಿ ಮಾತನಾಡಿದರು. ರಬಿಯಾ ಮುಜಾವರ, ಡಾ.ಚಂದ್ರಕಾಂತ ದೂಳಶೆಟ್ಟಿ, ಎಸ್.ಜಿ.ರಾಠೋಡ ಇತರರಿದ್ದರು,
ಕೊಕಟನೂರಿನಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ಪದ್ಧತಿ ನಿರ್ಮೂಲನೆ ಜಾಗೃತಿ ಜಾಥಾದಲ್ಲಿ ಡಾ.ಸವಿತಾ ಪೂಜಾರಿ ಮಾತನಾಡಿದರು. ರಬಿಯಾ ಮುಜಾವರ, ಡಾ.ಚಂದ್ರಕಾಂತ ದೂಳಶೆಟ್ಟಿ, ಎಸ್.ಜಿ.ರಾಠೋಡ ಇತರರಿದ್ದರು,
Published on
ಅಥಣಿ ಗ್ರಾಮೀಣ: ದೇವದಾಸಿಯಂತಹ ಅನಿಷ್ಟ ಪದ್ಧತಿಯನ್ನು ಸರ್ಕಾರ ನಿಷೇಧಿಸಿದೆ. ಇದನ್ನು ನಿರ್ಮೂಲಿಸಲು ಸರ್ಕಾರದೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಪಂ ಮಾಜಿ ಸದಸ್ಯೆ ಡಾ.ಸವಿತಾ ಪೂಜಾರಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ರಾಜ್ಯ ಮಹಿಳಾ ನಿಗಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥಣಿ ಹಾಗೂ ಬೆಳಗಾವಿ ದೇವದಾಸಿ ಪುನರ್ವಸತಿ ಯೋಜನೆಯಡಿ ಹಮ್ಮಿಕೊಂಡಿದ್ದ ದೇವದಾಸಿ ಪದ್ಧತಿ ನಿರ್ಮೂಲನೆ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮುತ್ತು ಕಟ್ಟುವುದು, ದೇವದಾಸಿ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಜಿಲ್ಲಾ ದೇವದಾಸಿ ಪುನರ್ವಸತಿ ಹಿರಿಯ ಮೇಲ್ವಿಚಾರಕಿ ರಬಿಯಾ ಮುಜಾವರ ಮಾತನಾಡಿ, ಅನಿಷ್ಟ ಪದ್ಧತಿ ಮೆಟ್ಟಿ ನಿಂತು, ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದರು.
ವೈದ್ಯಾಧಿಕಾರಿ ಡಾ.ಚಂದ್ರಕಾಂತ ದೂಳಶೆಟ್ಟಿ, ಕಂದಾಯ ನಿರೀಕ್ಷಕ ಎಸ್.ಜಿ.ರಾಠೋಡ, ಒ.ಐ.ಅರಟಾಳ ಮಾತನಾಡಿದರು. ಸಮಾಜಕಲ್ಯಾಣ ಇಲಾಖೆಯ ಎಸ್.ಎ.ಮಾಂಗ, ಆರ್.ಬಿ.ಹಿರೇಮನಿ, ಸಿಡಿಪಿಒ ಇಲಾಖೆ ವೀಣಾ ಅಡಹಳ್ಳಿ, ಗ್ರಾಮ ಆಡಳಿತಾಧಿಕಾರಿ ಕಲ್ಮೇಶ ಕಲಮಡಿ, ಪಿಡಿಒಗಳಾದ ಸಿದ್ದಪ್ಪ ತುಂಗಳ, ಬಿ.ಎಚ್.ಬಳೋಜ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಗೂಳಪ್ಪ ಪೂಜಾರಿ, ಗಿರೀಶ ಬಿಸಲನಾಯಿಕ, ಚಂದ್ರಶೇಖರ ನಾಗನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net