ಮಕ್ಕಳು ಜ್ಞಾನಾರ್ಜನೆಗೆ ಸಿದ್ಧರಾಗಲಿ

ಚಿಕ್ಕೋಡಿ ಕೆಎಲ್‌ಇ ಸಂಸ್ಥೆ ಬಿ.ಕೆ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಗಜಾನನ ನಾಯ್ಕ ಅವರನ್ನು ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಸನ್ಮಾನಿಸಿದರು. ಸುಧೀರ ಕೋಟಿವಾಲೆ, ಪ್ರಕಾಶ ಕೋಳಿ ಇತರರಿದ್ದರು.
ಚಿಕ್ಕೋಡಿ ಕೆಎಲ್‌ಇ ಸಂಸ್ಥೆ ಬಿ.ಕೆ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಗಜಾನನ ನಾಯ್ಕ ಅವರನ್ನು ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಸನ್ಮಾನಿಸಿದರು. ಸುಧೀರ ಕೋಟಿವಾಲೆ, ಪ್ರಕಾಶ ಕೋಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಗಜಾನನ ನಾಯ್ಕ ಸಲಹೆ
  • ವಿಶೇಷ ಉಪನ್ಯಾಸ ಕಾರ್ಯಕ್ರಮ
ಚಿಕ್ಕೋಡಿ: ಭೈರಪ್ಪನವರ ಕಾದಂಬರಿಗಳು ಮನುಷ್ಯನನ್ನು ಶೋಽಸುತ್ತವೆ. ಸಾಹಿತ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಓದುಗರನ್ನು ಹೊಂದಿದ್ದ ಎಸ್.ಎಲ್.ಭೈರಪ್ಪ ಅವರನ್ನು ಭಾರತೀಯ ಪ್ಯಾನ್ ಇಂಡಿಯಾ ಬರಹಗಾರ ಎನ್ನುತ್ತಾರೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಹಪ್ರಾಧ್ಯಾಪಕ ಡಾ.ಗಜಾನನ ನಾಯ್ಕ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಸಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡದಲ್ಲಿ ಮೊಟ್ಟಮೊದಲ ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದ ಎಸ್.ಎಲ್.ಭೈರಪ್ಪ ಎಂದರು.
ನಮ್ಮ ಬಗ್ಗೆ ನಾವು ಅಧ್ಯಯನ ಮಾಡುವುದೇ ಅನ್ವೇಷಣೆ. ನಮ್ಮನ್ನು ನಾವು ಅರ್ಥಮಾಡಿಕೊಂಡು ನಂತರ ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕು. ಓದುವಾಗ ವಿದ್ಯಾರ್ಥಿಗಳು ಜ್ಞಾನದ ಬೇಟೆಯಾಡಬೇಕು. ಬದಲಾಗಿ ಇಂದಿನ ವಿದ್ಯಾರ್ಥಿಗಳು ಅಂಕದ ಬೇಟೆಗೆ ಕಾತುಕರಾಗಿದ್ದಾರೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಮಾತನಾಡಿ, ಕನ್ನಡ ಬರಹಗಾರರಲ್ಲಿ ಸತ್ಯನಿಷ್ಠ. ಜನಮಾನಸದಲ್ಲಿ ನೆಲೆನಿಂತ ಎಸ್.ಎಲ್.ಭೈರಪ್ಪ ಅವರ ಬರವಣಿಗೆ ಹೊಸ ಚಿಂತನೆಗಳಿಗೆ ಅವಕಾಶ ನೀಡುತ್ತದೆ. ಅವರ ಬದುಕು ನಮಗೆ ಮಾದರಿ ಎಂದರು.
ಉಪಪ್ರಾಚಾರ್ಯ ಸುಧೀರ ಕೋಠಿವಾಲೆ, ಐಕ್ಯೂಎಸಿ ಸಂಯೋಜಕ ಡಾ.ವಿನಾಯಕ ಮಂಜಲಾಪುರ, ಪದವಿಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ, ವಿವಿಧ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಸ್.ಕೆ.ನಾಯಿಕ ಸ್ವಾಗತಿಸಿದರು. ಪೂಜಾ ರೋಹಿದಾಸ ನಿರೂಪಿಸಿದರು. ಡಾ.ಆರತಿ ತಮದಡ್ಡಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net