ಭಯೋತ್ಪಾದನೆ ನಿರ್ಣಾಮವಾಗಲಿ

ದೆಹಲಿಯ ಕಾರು ಬಾಂಬ್ ಸೋಟ ಖಂಡಿಸಿ ನಿಪ್ಪಾಣಿಯಲ್ಲಿ ಪ್ರತಿಭಟಿಸಲಾಯಿತು. ಪ್ರಾಣಲಿಂಗ ಸ್ವಾಮೀಜಿ, ನರ್ಮದಾತಾಯಿ, ಸಾಗರ ಶ್ರೀಖಂಡೆ ಇತರರು ಇದ್ದರು.
ದೆಹಲಿಯ ಕಾರು ಬಾಂಬ್ ಸೋಟ ಖಂಡಿಸಿ ನಿಪ್ಪಾಣಿಯಲ್ಲಿ ಪ್ರತಿಭಟಿಸಲಾಯಿತು. ಪ್ರಾಣಲಿಂಗ ಸ್ವಾಮೀಜಿ, ನರ್ಮದಾತಾಯಿ, ಸಾಗರ ಶ್ರೀಖಂಡೆ ಇತರರು ಇದ್ದರು.
Published on
ನಿಪ್ಪಾಣಿ: ಪಾಕಿಸ್ತಾನವು ಆರಂಭದಿಂದಲೂ ಭಯೋತ್ಪಾದಕರ ಮೂಲಕ ಭಾರತಕ್ಕೆ ನಿರಂತರವಾಗಿ ತೊಂದರೆ ನೀಡುತ್ತಿದೆ. ಭಯೋತ್ಪಾದಕರ ಕುರುಹು ವಿಶ್ವ ಭೂಪಟದಿಂದ ಅಳಿಸಬೇಕು ಎಂದು ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಹೇಳಿದರು.
ದೆಹಲಿಯ ಕಾರು ಬಾಂಬ್ ಸೋಟ ಖಂಡಿಸಿ ನಗರದ ಬಸ್ ನಿಲ್ದಾಣ ಬಳಿಯ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ಚೌಕ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದರು. ಇಂದಿನ ಯುವಜನರು ದೇಶ ಸೇವೆ ಮಾಡಲು ಸಿದ್ಧರಾಗಿರಬೇಕು. ಭಯೋತ್ಪಾದಕರು ಉನ್ನತ ಶಿಕ್ಷಣ ಪಡೆದಿದ್ದು, ಶಿಕ್ಷಣವನ್ನು ಭಯೋತ್ಪಾದನಾ ಕೃತ್ಯಗಳಿಗೆ ಬಳಸುತ್ತಿದ್ದಾರೆ. ನಿಮಗೆ ಏನಾದರೂ ಅನುಮಾನಾಸ್ಪದವಾಗಿ ಕಂಡು ಬಂದರೆ, ಹತ್ತಿರದ ಪೊಲೀಸ್ ಠಾಣೆ ಹಾಗೂ ದೇಶಭಕ್ತ ಸಂಘಟನೆಗಳಿಗೆ ಮಾಹಿತಿ ನೀಡಿ ಎಂದರು. 
ಕಣಗಲಾದ ದತ್ತಪೀಠ ಮಠದ ನರ್ಮದಾತಾಯಿ, ಸಾಗರ ಶ್ರೀಖಂಡೆ, ಆಕಾಶ ಮಾನೆ, ರಾಹುಲ ಸಡೋಲಕರ, ಸುರೇಶ ಬಾನಸೆ, ಅಭಿಜಿತ ಸಾದಲಕರ, ಯುವರಾಜ ಪಾಟೀಲ, ನಂದೇಶ ಸದಲಗೆ, ಅಜಿತ ಸಾದಲಕರ, ಅನಿಕೇತ ಪಡತಾರೆ, ಸುಶಾಂತ ಕಾಂಬಳೆ, ಅನಿಲ ಚೌಗುಲೆ, ಹೇಮಂತ ಚವ್ಹಾಣ, ಆಕಾಶ ಚವ್ಹಾಣ, ರಾಹುಲ ಪಾಟೀಲ, ಶಾಂತಿನಾಥ ಮುದುಕುಡೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net