ವಿದ್ಯಾರ್ಥಿಗಳು ಶಾಲೆಯ ಉಪಯೋಗ ಪಡೆಯಲಿ

ಐನಾಪುರ ಪಟ್ಟಣದ ಪದ್ಮಾವತಿ ಸೆಂಟ್ರಲ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಚಿದಾನಂದ ಸವದಿ ಉದ್ಘಾಟಿಸಿದರು. ಶೀತಲ ಪಾಟೀಲ, ಪ್ರವೀಣ ಗಾಣಿಗೇರ ಇತರರಿದ್ದರು.
ಐನಾಪುರ ಪಟ್ಟಣದ ಪದ್ಮಾವತಿ ಸೆಂಟ್ರಲ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಚಿದಾನಂದ ಸವದಿ ಉದ್ಘಾಟಿಸಿದರು. ಶೀತಲ ಪಾಟೀಲ, ಪ್ರವೀಣ ಗಾಣಿಗೇರ ಇತರರಿದ್ದರು.
Published on
ಐನಾಪುರ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಹಕಾರದೊಂದಿಗೆ ಅಥಣಿ ಸಮೀಪದ ಶೀನಾಳ ಗ್ರಾಮಕ್ಕೆ ಕೇಂದ್ರಿಯ ಮಹಾವಿದ್ಯಾಲಯ ಮಂಜೂರುಗೊಳಿಸಿದ ಕೀರ್ತಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಲ್ಲುತ್ತದೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಪಟ್ಟಣದ ಪದ್ಮಾವತಿ ಸೆಂಟ್ರಲ್ ಸ್ಕೂಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೂ ಉನ್ನತ ಶಿಕ್ಷಣ ದೊರಕಿಸಬೇಕೆಂಬ ಉದ್ದೇಶದಿಂದ ಶಾಲೆ ಮಂಜೂರು ಮಾಡಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿ, ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ನೀಡಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಸಂಸ್ಥೆ ಅಧ್ಯಕ್ಷ ಸಂಜಯ ಕುಚನೂರೆ, ಪಪಂ ಸದಸ್ಯ ಪ್ರವೀಣ ಗಾಣಿಗೇರ, ಸಂಸ್ಥೆ ಉಪಾಧ್ಯಕ್ಷ ರವೀಂದ್ರ ಬಣಜವಾಡ, ಕಾರ್ಯದರ್ಶಿ ಪ್ರಮೋದ ಲಿಂಬಿಕಾಯಿ, ಖಜಾಂಚಿ ಗಜಕುಮಾರ ಪಾಟೀಲ, ನಿರ್ದೇಶಕರಾದ ಬಾಪುಸಾಹೇಬ ಪಾಟೀಲ, ಮಹಾವೀರ ಪಾಟೀಲ, ಜಯಕುಮಾರ ಪಾಟೀಲ, ಮಹಾವೀರ ಲಿಂಬಿಕಾಯಿ, ವಸಂತ ಹುದ್ದಾರ. ಶೀತಲ ಪಾಟೀಲ, ಮೋಹನ ಪಾಟೀಲ, ಸಿದ್ಧಾಂತ ಬಣಜವಾಡ, ಮಂಜುನಾಥ ಕುಚನೂರೆ, ಭರತೇಶ ತೇರದಾಳೆ, ಸಂತೋಷ ತೇರದಾಳೆ, ಶ್ರೀಕಾಂತ ಪಾಟೀಲ, ಕುಮಾರ ಮಾಲಗಾಂವೆ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net