ಅಳಗವಾಡಿ: ತಂದೆ-ತಾಯಿ ಮಕ್ಕಳಿಗೆ ಆದರ್ಶವಾದರೆ ಅವರ ಬದುಕು ಸಾರ್ಥಕವಾಗುತ್ತದೆ ಎಂದು ಹಾರೂಗೇರಿ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ನಿರ್ದೇಶಕ ವಿ.ಎಸ್.ಮಾಳಿ ಹೇಳಿದರು.
ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು.
ಹನುಮಂತ ಗುರವ ಮಾತನಾಡಿ, ಯುವಕರಲ್ಲಿ ಭಾರತೀಯ ಸಂಸ್ಕೃತಿ ಮರೆಯಾಗುತ್ತಿದ್ದು, ಧಾರ್ಮಿಕ ಹಾಗೂ ಸಂಸ್ಕೃತಿ ಅರಿವು ಮೂಡಿಸಬೇಕು ಎಂದರು.
ಬಸ್ತವಾಡದ ಬಸವರಾಜ ಶರಣರು ಆಶೀರ್ವಚನ ನೀಡಿದರು. ಪತ್ರಕರ್ತ ಅಬ್ಬಾಸ್ ಲತೀಫ್, ಸಂಭಾಜಿರಾವ್ ಚವ್ಹಾಣ, ಭೀಮಪ್ಪ ಕಿಚಡೆ, ಕುಮಾರ ಸುತಾರ ಇವರನ್ನು ಅಂತಾರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಸನ್ಮಾನಿಸಲಾಯಿತು.
ಜಿಪಂ ಮಾಜಿ ಸದಸ್ಯ ಮಹಾದೇವ ಶಿರಗೂರೆ, ಕನಕದಾಸ ಪಿಕೆಪಿಎಸ್ ಅಧ್ಯಕ್ಷ ಮಾರುತಿ ಪಡಚೆ, ನಿಂಗಪ್ಪ ತೇರದಾಳೆ, ಮಲ್ಲಪ್ಪ ಅವಟೆ, ತಮ್ಮಣ್ಣ ಅವಟೆ, ಮಹಾದೇವ ಮಠದ, ಮಲ್ಲಪ್ಪ ಹಂಜೆ, ಕುಮಾರ ಬನಶಂಕರಿ ಇತರರಿದ್ದರು.