ಗಡಿಭಾಗದಲ್ಲಿ ಕನ್ನಡ ಗಟ್ಟಿಗೊಳ್ಳಲಿ

ಕಾರದಗಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಮಾವೇಶವನ್ನು ಡಾ.ಬಸವರಾಜ ಜಗಜಂಪಿ ಉದ್ಘಾಟಿಸಿದರು. ಉತ್ತಮ ಪಾಟೀಲ, ಅಣ್ಣಾಸಾಹೇಬ ಹವಲೆ, ರಾಜು ಖಿಚಡೆ ಇತರರಿದ್ದರು.
ಕಾರದಗಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಮಾವೇಶವನ್ನು ಡಾ.ಬಸವರಾಜ ಜಗಜಂಪಿ ಉದ್ಘಾಟಿಸಿದರು. ಉತ್ತಮ ಪಾಟೀಲ, ಅಣ್ಣಾಸಾಹೇಬ ಹವಲೆ, ರಾಜು ಖಿಚಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವರಾಜ ಜಗಜಂಪಿ ಆಶಯ
  • ಕಾರದಗಾದಲ್ಲಿ ಸಮಾವೇಶ
ಬೋರಗಾಂವ: ಗಡಿಭಾಗ ಗಟ್ಟಿಯಾದರೆ ನುಡಿ ಗಟ್ಟಿಯಾಗುತ್ತದೆ. ಕನ್ನಡ ಮತ್ತು ಮರಾಠಿ ಭಾಷೆಗಳು ಗಡಿಯಲ್ಲಿ ಅನ್ಯೋನ್ಯತೆಯಿಂದ ಇರಬೇಕು. ಎರಡೂ ಭಾಷಿಕರ ನಡುವಿನ ಸಾಮರಸ್ಯದಿಂದ ಕನ್ನಡದ ಅಸ್ಮಿತೆ ಉಳಿಯುತ್ತದೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಹೇಳಿದರು.
ಸಮೀಪದ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ೮ನೇ ಕನ್ನಡ ಸಮಾವೇಶದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಉಳಿಯುವ ಇತಿಹಾಸ ಹೊಂದಿದೆ. ಜಾನಪದ ಸಾಹಿತ್ಯ ಶತಮಾನಗಳಿಂದ ಉಳಿದುಕೊಂಡು ಬಂದಿರುವುದು ಕನ್ನಡಿಗರ ಹೆಮ್ಮೆಯಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಅಣ್ಣಾಸಾಹೇಬ ಹವಲೆ ಮಾತನಾಡಿ, ಕನ್ನಡ ಸಾಹಿತ್ಯ ಸಂಸ್ಕೃತಿ, ಸಂಪ್ರದಾಯಗಳನ್ನು ಆಧುನಿಕತೆ ಅಲೆಯಲ್ಲಿ ಮರೆಯದೇ ಬಳಸಿ ಬೆಳೆಸಬೇಕೆಂದರು.
ಚಿಂಚಣಿ ಅಲ್ಲಮಪ್ರಭು ಸಂಸ್ಥಾನ ಮಠದ ಶಿವಪ್ರಸಾದ ದೇವರು ಸಾನ್ನಿಧ್ಯ ವಹಿಸಿದ್ದರು. ಕೌಲಗುಡ್ಡದ ಅಮರೇಶ್ವರ ಸ್ವಾಮೀಜಿ, ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಅಭಿಯಂತ ತಾತ್ಯಾಸಾಹೇಬ ಚೌಗುಲೆ, ವೈದ್ಯ ಸುದರ್ಶನ ಮುರಾಬಟ್ಟೆ, ಮುಖ್ಯಶಿಕ್ಷಕಿ ಮಂಗಲಾ ಖೋತ, ಸಾಹಿತಿ ಶಿವಾನಂದ ಭಾಗಾಯಿ, ಪತ್ರಕರ್ತ ಸುಧೀರ ಕುಂಭೋಜಕರ ಅವರನ್ನು ಸನ್ಮಾನಿಸಲಾಯಿತು.
ಸದಲಗಾದ ಧರೀಖಾನ್ ಅಜ್ಜ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ನಿಪ್ಪಾಣಿ ಬಿಇಒ ಮಹಾದೇವಿ ನಾಯಿಕ, ಗ್ರಾಪಂ ಅಧ್ಯಕ್ಷೆ ಸ್ವಾತಿ ಕಾಂಬಳೆ, ಜಿಪಂ ಮಾಜಿ ಸದಸ್ಯ ರಾಜೇಂದ್ರ ವಡ್ಡರ, ಸುಮಿತ್ರಾ ಉಗಳೆ, ಅಭಿನಂದನ ಮೂರಾಬಟ್ಟೆ, ರತನ್ ಮೆಳವಂಕಿ, ಅರುಣ ದೇಸಾಯಿ, ಸಾಗರ ಮಿರ್ಜೆ, ಅರವಿಂದ ಕರಾಡೆ, ಕನ್ನಡ ಬಳಗದ ಅಧ್ಯಕ್ಷ ಸಂಜೀವ ಗಾವಡೆ ಇತರರಿದ್ದರು.

ಕನ್ನಡ ಬಳಗದ ಗೌರವಾಧ್ಯಕ್ಷ ರಾಜು ಖಿಚಡೆ ಸ್ವಾಗತಿಸಿದರು. ಮಾಣಿಕ ಚಂದಗಡೆ ನಿರೂಪಿಸಿದರು. ಬಾಹುಬಲಿ ನರವಾಡೆ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ, ಭುವನೇಶ್ವರಿ ಪೂಜೆ, ಗ್ರಂಥಪೂಜೆ, ಬುತ್ತಿಪೂಜೆಗಳೊಂದಿಗೆ ಪ್ರಾರಂಭವಾದ ಮೆರವಣಿಗೆಗೆ ಜಿಪಂ ಮಾಜಿ ಸದಸ್ಯ ರಾಜೇಂದ್ರ ವಡ್ಡರ ಚಾಲನೆ ನೀಡಿದರು.
"

ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ಗಟ್ಟಿಗೊಳಿಸುವ ಕಾರದಗಾ ಕನ್ನಡ ಬಳಗದ ಕಾರ್ಯ ಶ್ಲಾಘನೀಯ. ಕನ್ನಡದ ಮನಸ್ಸುಗಳೆಲ್ಲ ಕನ್ನಡ ಕಟ್ಟಲು ಕಂಕಣಬದ್ಧರಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net