ಮಲ್ಲಮ್ಮನ ಬೆಳವಡಿ: ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡಾಗ ಧರ್ಮ ಸಂರಕ್ಷಣೆ ಸಾಧ್ಯ ಎಂದು ಹಿಂದೂ ಜಾಗರಣ ವೇದಿಕೆ ಮುಖ್ಯ ವಕ್ತಾರ ಶಿವಾನಂದ ಬಡಿಗೇರ ಹೇಳಿದರು.
ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮಾವೇಶ ಸಮ್ಮೇಳನದಲ್ಲಿ ಮಾತನಾಡಿ, ಪೂರ್ವಿಕರ ಶ್ರಮ, ಬಲಿದಾನದಿಂದ ಸನಾತನ ಹಿಂದೂ ಧರ್ಮ ಇನ್ನು ಜೀವಂತವಿದೆ. ಅದರ ಪಾಲನೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು. ಮುನವಳ್ಳಿ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ದೇವತೆಗಳು ಕೂಡ ಭಾರತದಲ್ಲಿ ಹುಟ್ಟಬೇಕು ಎಂದು ಆಸೆ ಪಡುತ್ತಾರೆ. ಶಾಲೆಯಲ್ಲಿ ವಾರದಲ್ಲಿ ಒಂದು ದಿನವಾದರೂ ಹಿಂದುತ್ವ ಕಲಿಸಬೇಕಿದೆ ಎಂದು ಹೇಳಿದರು.
ರಾಣಿ ಮಲ್ಲಮ್ಮ ಬ್ಯಾಂಕ ಅಧ್ಯಕ್ಷ ರುದ್ರಯ್ಯ ರೊಟ್ಟಯ್ಯನವರ, ಜಡಿಸಿದ್ಧೇಶ್ವರ ಸ್ವಾಮೀಜಿ, ಧರ್ಮದರ್ಶಿ ವಿರೂಪಾಕ್ಷ ಅಜ್ಜನವರು, ಏಣಗಿ ಮಠದ ಬಂಗಾರಜ್ಜ, ಕೆಂಗಾನೂರ ಕಲ್ಮೇಶ್ವರ ಮಠದ ಶಿವಬಸವ ಸ್ವಾಮೀಜಿ, ರಾಜಯೋಗಿನಿ ಬಿ.ಕೆ. ಪಾರ್ವತಿ ಇತರರಿದ್ದರು.