ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಕೆಎಸ್‌ಎನ್, ಬೇಂದ್ರೆ ಮತ್ತು ಬಸವರಾಜ ಕಟ್ಟೀಮನಿ ಪ್ರತಿಷ್ಠಾನಗಳು ಕನ್ನಡ ನಾಡು, ಭಾಷೆ ಗಟ್ಟಿಗೊಳಿಸಲು ತ್ರಿಮೂರ್ತಿಯಂತೆ ಶ್ರಮಿಸಲು ಸಿದ್ಧವಿದೆ. ಮೊಬೈಲ್ ಪೀಳಿಗೆಗೆ ಬಲಿಯಾಗುತ್ತಿರುವ ಯುವ ಪೀಳಿಗೆಗೆ ಕಾವ್ಯ ಮತ್ತು ಸಾಹಿತ್ಯಲೋಕ ಪರಿಚಯಿಸುತ್ತಿರುವ ಇಂತಹ ಸತ್ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.