ಗುಣಮಟ್ಟದ ಸೇವೆಗೆ ಕೆಎಲ್​ಇ ಆದ್ಯತೆ

ಕರಗಾವದಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೆಎಲ್​ಇ ಸಂಸ್ಥೆ ನಿರ್ದೇಶಕ ಬಸವರಾಜ ಪಾಟೀಲ ಮಾತನಾಡಿದರು. ರಾಜು ಪಾಟೀಲ, ಡಾ.ಮುರುಘೇಶ ಕುರಣಿ, ಎಂ.ಟಿ.ಕುರಣಿ, ರಾಜು ಪಾಟೀಲ, ಬಾಬಾಗೌಡ ಪಾಟೀಲ ಇತರರಿದ್ದರು.
ಕರಗಾವದಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೆಎಲ್​ಇ ಸಂಸ್ಥೆ ನಿರ್ದೇಶಕ ಬಸವರಾಜ ಪಾಟೀಲ ಮಾತನಾಡಿದರು. ರಾಜು ಪಾಟೀಲ, ಡಾ.ಮುರುಘೇಶ ಕುರಣಿ, ಎಂ.ಟಿ.ಕುರಣಿ, ರಾಜು ಪಾಟೀಲ, ಬಾಬಾಗೌಡ ಪಾಟೀಲ ಇತರರಿದ್ದರು.
Published on

ಮಾಂಜರಿ:

ಕಾಹೆರ್​ ಕುಲಾಧಿಪತಿ ಡಾ.ಪ್ರಭಾಕರ ಕೋರೆ ದೂರದೃಷ್ಟಿ ಫಲವಾಗಿ ಕೆಎಲ್​ಇ ಸಂಸ್ಥೆ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದೆ. ಇದರಿಂದ ಗ್ರಾಮೀಣ ಜನತೆಗೆ ಅನುಕೂಲವಾಗಿದೆ ಎಂದು ಕೆಎಲ್​ಇ ಸಂಸ್ಥೆ ನಿರ್ದೇಶಕ ಬಸವರಾಜ ಪಾಟೀಲ ಹೇಳಿದರು.

ಚಿಕ್ಕೋಡಿ ತಾಲೂಕಿನ ಕರಗಾವ ಗ್ರಾಮದಲ್ಲಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸೇವೆ ನಿರಂತರವಾಗಿ ಮುಂದುವರಿಸಲು ಡಾ.ಪ್ರಭಾಕರ ಕೋರೆ ನೇತೃತ್ವದಲ್ಲಿ ಕೆಎಲ್​ಇ ಸಂಸ್ಥೆ ಪ್ರಯತ್ನಗಳು ಮುಂದುವರಿಯಲಿವೆ ಎಂದು ಹೇಳಿದರು.
ಡಾ.ಮುರುಘೇಶ ಕುರಣಿ ಮಾತನಾಡಿ, ಆರೋಗ್ಯ ದೇವರು ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಅದನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮ ಅಗತ್ಯ. ಒತ್ತಡದ ಜೀವನಶೈಲಿಯಲ್ಲಿ ಅನೇಕರು ಆರೋಗ್ಯ ಕುರಿತು ರ್ನಿಲಕ್ಷ$್ಯವಹಿಸುತ್ತಿದ್ದು, ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿ. ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದರು.
ಬಸವಪ್ರಭು ಕೋರೆ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಎಂ.ಟಿ.ಕುರಣಿ, ರಾಜು ಪಾಟೀಲ, ಬಾಬಾಗೌಡ ಪಾಟೀಲ, ಬಾಳು ಕುರಣಿ, ಪ್ರಶಾಂತ ಪೂಜಾರಿ ಇತರರಿದ್ದರು. ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ತೀವ್ರ ನಿಗಾ ಟಕದ ಅಧಿಕಾರಿ ಪ್ರಶಾಂತ ಪೂಜಾರಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net