ಕೆಎಲ್‌ಇ ಸಂಸ್ಥೆ ಉನ್ನತಿಗೆ ಬದ್ಧ

ನೂತನ ಕಾರ್ಯಾಧ್ಯಕ್ಷರ ಸನ್ಮಾನ
ನೂತನ ಕಾರ್ಯಾಧ್ಯಕ್ಷರ ಸನ್ಮಾನ
Published on
ಮಾಂಜರಿ: ಸಮಾಜದ ಎಲ್ಲ ಬಡ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಸಪ್ತರ್ಷಿಗಳ ಆಶಯದಂತೆ ಹುಟ್ಟಿರುವ ಕೆಎಲ್‌ಇ ಸಂಸ್ಥೆಯನ್ನು ಡಾ.ಪ್ರಭಾಕರ ಕೋರೆ ಅವರು ವಿಶ್ವಮಟ್ಟಕ್ಕೆ ಬೆಳೆಸಿದ್ದಾರೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಅಮಿತ ಕೋರೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಸಭಾಗೃಹದಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಪರವಾಗಿ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಪದ್ಮಶ್ರೀ ಪುರಸ್ಕೃತರಾದ ತಂದೆ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಕೆಎಲ್‌ಇ ಸಂಸ್ಥೆಯ ಉನ್ನತಿಗೆ ಬದ್ಧತೆಯಿಂದ ಶ್ರಮಿಸುತ್ತೇನೆ.
ರಾಜ್ಯದ ಹಲವು ಪಟ್ಟಣದಲ್ಲಿ ಕೆಎಲ್‌ಇ ವೈದ್ಯಕೀಯ ಸಂಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿ ಸಮಾಜದ ಹಿತಕ್ಕಾಗಿ ಶ್ರಮಿಸುತ್ತೇನೆ ಎಂದರು.
ಅಮಿತ ಕೋರೆ ಅವರನ್ನು ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಸನ್ಮಾನಿಸಿದರು. ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ, ನಿರ್ದೇಶಕರಾದ ಅಜಿತ್‌ರಾವ್ ದೇಸಾಯಿ, ಭರತೇಶ ಬನವಣೆ, ಅನ್ನಾಸಾಹೇಬ ಪಾಟೀಲ, ಚೇತನ ಪಾಟೀಲ, ಮಹಾವೀರ ಕಾತ್ರಾಳೆ, ಮಲ್ಲಪ್ಪ ಮೈಶಾಳೆ, ಸಂದೀಪ ಪಾಟೀಲ, ಭರಮಗೌಡ ಪಾಟೀಲ, ಅಣ್ಣಾಸಾಹೇಬ ಇಂಗಳೆ, ಮಹಾವೀರ ಮಿರ್ಜಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಖಂಡಗಾವಿ, ಸಕ್ಕರೆ ಕಾರ್ಖಾನೆ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿ ಹಾಜರಿದ್ದರು.
ಕೋರೆ ಸೊಸೈಟಿಯಿಂದ ಸತ್ಕಾರ: ಮಾಂಜರಿ: ಕೆಎಲ್‌ಇ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಅಮಿತ ಕೋರೆಯವರನ್ನು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ.ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಟಿ ಆಡಳಿತ ಮಂಡಳಿ ಪರವಾಗಿ ಸೋಮವಾರ ಸನ್ಮಾನಿಸಲಾಯಿತು.
ಡಾ.ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಮಹಾಂತೇಶ ಪಾಟೀಲ, ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸಂಸ್ಥೆಯ ಉಪಾಧ್ಯಕ್ಷ ಸಿದ್ದಗೌಡ ಮಗದುಮ್ಮ, ನಿರ್ದೇಶಕರಾದ ವಿವೇಕ ಕಮತೆ, ಪ್ರುಲ್ಲ ಶೆಟ್ಟಿ, ಅನಿಲ ಪಾಟೀಲ, ಅಮಿತ್ ಜಾಧವ, ಅಶೋಕ ಚೌಗುಲಾ, ಪಿಂಟು ಹಿರೇಕುರಬರ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ, ಸಿಬ್ಬಂದಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net