ಈ ಯೋಜನ ಪೂರ್ಣದಲ್ಲಿ ಅನುಷ್ಠಾನಗೊಂಡರೆ ಕರಗಾಂವ, ಕರೋಶಿ, ಡೋಣವಾಡ, ಬಂಬಲವಾಡ, ಬೆಣ್ಣಿಹಳ್ಳಿ, ಕಮತ್ಯಾನಟ್ಟಿ, ನಾಗರಮುನ್ನೋಳಿ, ಉಮರಾಣಿ, ಕಬ್ಬೂರ, ಬೆಳಕೂಡ, ಮುಗಳಿ, ಹಂಚಿನಾಳ, ಇಟ್ನಾಳ, ಕುಂಗಟೋಳ್ಳಿ ಗ್ರಾಮಗಳಲ್ಲಿನ ಮಳೆಯಾಶ್ರಿತ ಭೂಮಿ ಹಸಿರಿನಿಂದ ಕಂಗೊಳಿಸಲಿದೆ. ಈ ಯೋಜನೆಗಾಗಿ ಕೃಷ್ಣಾ ನದಿಯಿಂದ 0.77 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.