ನಾಳೆ ಕರಗಾಂವ ಏತ ನೀರಾವರಿಗೆ ಚಾಲನೆ

ಚಿಕ್ಕೋಡಿಯಲ್ಲಿ ಶಾಸಕ ದುರ್ಯೋಧನ ಐಹೊಳೆ ಮಾತನಾಡಿದರು. ಮಹೇಶ ಭಾತೆ, ವಿಜಯ ಕೋಠಿವಾಲೆ ಇತರರಿದ್ದರು.
ಚಿಕ್ಕೋಡಿಯಲ್ಲಿ ಶಾಸಕ ದುರ್ಯೋಧನ ಐಹೊಳೆ ಮಾತನಾಡಿದರು. ಮಹೇಶ ಭಾತೆ, ವಿಜಯ ಕೋಠಿವಾಲೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದುರ್ಯೋಧನ ಐಹೊಳೆ ಮಾಹಿತಿ
  • ೩೯ ಕೆರೆಗಳ ಭರ್ತಿಗೆ ೭ರಂದು ಪೂಜೆ
ಚಿಕ್ಕೋಡಿ: ರೈತರ ಕನಸಾಗಿದ್ದ ರಾಯಬಾಗ ಕ್ಷೇತ್ರ ವ್ಯಾಪ್ತಿಯ ಕರಗಾಂವ ಏತನೀರಾವರಿ ಯೋಜನೆಗೆ ಡಿ.೪ರಂದು ಹಾಗೂ ರಾಯಬಾಗ ತಾಲೂಕಿನ ೩೯ ಕೆರೆಗಳ ಭರ್ತಿಗೆ ಡಿ.೭ರಂದು ಚಾಲನೆ ನೀಡಲಾಗುವುದು ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕೋಡಿ ತಾಲೂಕಿನ ೧೪ ಗ್ರಾಮಗಳ ನೀರಾವರಿಗೆ ೫೬೭ ಕೋಟಿ ರೂ. ಮೊತ್ತದ ಕರಗಾಂವ ಏತನೀರಾವರಿ ಯೋಜನೆ ಜಾಕವೆಲ್ ಕಾಮಗಾರಿ ಹಾಗೂ ೪ ಕಿಮೀ ಪೈಪ್‌ಲೈನ್ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ೧೦೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಡಿ.೪ರಂದು ಬೆಳಗ್ಗೆ ೧೧ ಗಂಟೆಗೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಕಾಮಗಾರಿಗೆ ಎಂಎಲ್‌ಸಿ ಪ್ರಕಾಶ ಹುಕ್ಕೇರಿ ಚಾಲನೆ ನೀಡುವರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ ಪಾಲ್ಗೊಳ್ಳುವರು. ೬೦ ಕೋಟಿ ರೂ. ಮೊತ್ತದಲ್ಲಿ ರಾಯಬಾಗ ವ್ಯಾಪ್ತಿಯ ೩೯ ಕೆರೆಗಳ ಭರ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಡಿ.೭ರಂದು ಮಧ್ಯಾಹ್ನ ೧೨ಕ್ಕೆ ಬಾವನಸೌಂದತ್ತಿ ಗ್ರಾಮದ ಸುಗಂಧಾದೇವಿ ದೇವಸ್ಥಾನ ಬಳಿ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹೇಶ ಭಾತೆ, ವಿಜಯ ಕೋಠಿವಾಲೆ, ವಿರೂಪಾಕ್ಷ ಈಟಿ, ರಮೇಶ ಕಾಳನ್ನವರ, ಲಕ್ಷ್ಮಣ ಪೂಜೇರಿ, ರವಿ ಹಿರೇಕೋಡಿ, ರಾಜು ಹರಗನ್ನವರ, ದುಂಡಪ್ಪ ಬೆಂಡವಾಡೆ, ಮಹಾಂತೇಶ ಯಶವಂತಗೋಳ, ಮಲ್ಲಪ್ಪ ಅರಬಾವಿ, ಸಂಬಾಜಿ ಚವ್ಹಾಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net