ಕನ್ನಡಿಗರೇ ಕರ್ನಾಟಕ ಪರ ಗೊತ್ತುವಳಿ ಸ್ವೀಕರಿಸುತ್ತಿಲ್ಲ

ವಡಗಾವಿಯಲ್ಲಿ ಭಾನುವಾರ ಜರುಗಿದ ಗಡಿನಾಡು ಕನ್ನಡಿಗರ ಸೇನೆಯ ಉದ್ಘಾಟನೆಯಲ್ಲಿ ಅಶೋಕ ಚಂದರಗಿ, ರಮೇಶ ಸೊಂಟಕ್ಕಿ, ಬಲರಾಮ ಮಾಸೇನಟ್ಟಿ, ವಂದನಾ ಹೊರಕೇರಿ ಇತರರಿದ್ದರು.
ವಡಗಾವಿಯಲ್ಲಿ ಭಾನುವಾರ ಜರುಗಿದ ಗಡಿನಾಡು ಕನ್ನಡಿಗರ ಸೇನೆಯ ಉದ್ಘಾಟನೆಯಲ್ಲಿ ಅಶೋಕ ಚಂದರಗಿ, ರಮೇಶ ಸೊಂಟಕ್ಕಿ, ಬಲರಾಮ ಮಾಸೇನಟ್ಟಿ, ವಂದನಾ ಹೊರಕೇರಿ ಇತರರಿದ್ದರು.
Published on

ಬೆಳಗಾವಿ :

ಬೆಳಗಾವಿ ಗಡಿ ಹೋರಾಟದ ಇತಿಹಾಸದಲ್ಲಿ ನೇಕಾರ ಮತ್ತು ಲಿಂಗಾಯತ ಸಮುದಾಯ ಪ್ರಮುಖ ಪಾತ್ರ ವಹಿಸುತ್ತ ಬಂದಿವೆ. ಆದರೆ, ಇದೇ ಸಮುದಾಯವನ್ನು ಪ್ರತಿನಿಧಿಸುವ ಮಹಾಪೌರ, ಉಪ ಮಹಾಪೌರರು ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಖೇದ ವ್ಯಕ್ತಪಡಿಸಿದರು.
ವಡಗಾವಿಯಲ್ಲಿ ಭಾನುವಾರ ಗಡಿನಾಡು ಕನ್ನಡಿಗರ ಸೇನೆಯ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಅಪ್ಪಟ ಕನ್ನಡಿಗರಾದ ಮಹಾಪೌರ ಮತ್ತು ಉಪ ಮಹಾಪೌರರು ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸಬೇಕು. ಬೆಳಗಾವಿಯಲ್ಲಿ ಕಳೆದ ಐದು ದಶಕಗಳಲ್ಲಿ ನಡೆದ ಕನ್ನಡ ಚಳವಳಿಗಳಲ್ಲಿ ಭಾಗವಹಿಸಿದವರಲ್ಲಿ ವಡಗಾವಿ ಭಾಗದ ಕನ್ನಡ ಅಭಿಮಾನಿಗಳೇ ಅಧಿಕ ಸಂಖ್ಯೆಯಲ್ಲಿದೆ. 1988ರಲ್ಲಿ ಬೆಂಗಳೂರಿಗೆ ಹೋಗಿದ್ದ 1,200 ಜನರ ರೈಲು ಜಾಥಾದಲ್ಲಿ ಶೇ.90ರಷ್ಟು ಜನ ಈ ಭಾಗದವರಿದ್ದರು ಎಂದು ಸ್ಮರಿಸಿಕೊಂಡರು.
ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ಗಡಿನಾಡು ಕನ್ನಡಿಗರ ಸೇನೆ ಅಧ್ಯಕ್ಷ ಬಲರಾಮ ಮಾಸೇನಟ್ಟಿ, ಉಪಾಧ್ಯಕ್ಷೆ ವಂದನಾ ಹೊರಕೇರಿ, ಆನಂದ ಬಿಲಾವರ, ಸಂತೋಷ ಮಾಸೇನಟ್ಟಿ, ಮಂಜುನಾಥ ಪಾಸ್ತಿ, ರಂಜನ ಹಳಬರ, ರಾಹುಲ್ ಭೋಸ್ಲೆ, ಸಿದ್ದರಾಯ ಮಾಸೇನಟ್ಟಿ, ಸಾಗರ ಕೋಲ್ಕಾರ, ಎಸ್.ಎಸ್.ಮೂಕನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net