ಜ್ಯೋತಿರ್ಲಿಂಗ ದರ್ಶನಕ್ಕೆ 19ರಂದು ಅವಕಾಶ

ಬೈಲಹೊಂಗಲ ಮೂರುಸಾವಿರ ಮಠದಲ್ಲಿ ಪ್ರಭುನೀಲಕಂಠ ಸ್ಚಾಮೀಜಿ ಸಾನ್ನಿಧ್ಯದಲ್ಲಿ ಬಸವ ಜಯಂತಿ ಆಚರಣೆ ಹಾಗೂ ಜ್ಯೋತಿರ್ಲಿಂಗ ಸ್ವಾಗತಿಸುವ ಕುರಿತು ಸಭೆ ಜರುಗಿತು. ಶಿವರಂಜನ ಬೋಳನ್ನವರ, ಡಾ.ಎ.ಎನ್.ಬಾಳಿ ಇತರರು ಇದ್ದರು.
ಬೈಲಹೊಂಗಲ ಮೂರುಸಾವಿರ ಮಠದಲ್ಲಿ ಪ್ರಭುನೀಲಕಂಠ ಸ್ಚಾಮೀಜಿ ಸಾನ್ನಿಧ್ಯದಲ್ಲಿ ಬಸವ ಜಯಂತಿ ಆಚರಣೆ ಹಾಗೂ ಜ್ಯೋತಿರ್ಲಿಂಗ ಸ್ವಾಗತಿಸುವ ಕುರಿತು ಸಭೆ ಜರುಗಿತು. ಶಿವರಂಜನ ಬೋಳನ್ನವರ, ಡಾ.ಎ.ಎನ್.ಬಾಳಿ ಇತರರು ಇದ್ದರು.
Published on
ನಗರದ ಮೂರುಸಾವಿರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜ್ಯೋತಿರ್ಲಿಂಗ ದರ್ಶನ ಹಾಗೂ ಬಸವ ಜಯಂತಿ ಆಚರಣೆ ಕಾರ್ಯಕ್ರಮ ಪೂರ್ವಭಾವಿ ಸಭೆ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ದೇಶಾದ್ಯಂತ ಜ್ಯೋತಿರ್ಲಿಂಗ ಸಂಚರಿಸಿ ತಾಲೂಕು ಕೇಂದ್ರವಾಗಿರುವ ಬೈಲಹೊಂಗಲಕ್ಕೂ ಆಗಮಿಸುತ್ತಿರುವುದು ನಮ್ಮ ಸೌಭಾಗ್ಯ. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜ್ಯೋತಿರ್ಲಿಂಗವನ್ನು ಭವ್ಯವಾಗಿ ಸ್ವಾಗತಿಸಬೇಕು. ಮಠದ ಸಭಾ ಭವನದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಸಂಕಲ್ಪ ಮಾಡಿಕೊಂಡು ಹೂವು, ಹಣ್ಣು, ಪತ್ರಿ, ವಿವಿಧ ಸೇವೆ ಮಾಡಬಹುದು ಎಂದರು.
ಏ.20ರಂದು ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವು ಶ್ರೀಮಠದಿಂದ ಜಾತ್ಯತೀತ, ಪಕ್ಷಾತೀತವಾಗಿ ವಿಶ್ವಗುರು ಬಸವೇಶ್ವರ ಜಯಂತಿ ಆಚರಣೆ ನಡೆಯಲಿದೆ. ಅಂದು ಬೆಳಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣ, ತೊಟ್ಟಿಲೋತ್ಸವ, ಮಿನಿ ವಿಧಾನಸೌಧದ ಪಕ್ಕದ ಬಸವೇಶ್ವರ ಉದ್ಯಾನದ ಬಸವೇಶ್ವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಗುವುದು. ಸಂಜೆ 4ಕ್ಕೆ ಪೂರ್ಣಕುಂಭದೊಂದಿಗೆ ಜೋಡೆತ್ತಿನ ಮೆರವಣಿಗೆ ನಡೆಸಲಾಗುವುದು. ಬಸವ ಜಯಂತಿ ಆಚರಣೆ ಕಾರ್ಯಕ್ರಮವನ್ನು ಎಲ್ಲರೂ ಯಶಸ್ವಿಗೊಳಿಸಬೇಕು ಎಂದರು.
ಹರ್ಷಾ ಮೆಟಗುಡ್ಡ ಜ್ಯೋತಿರ್ಲಿಂಗ ಕುರಿತು ಮಾಹಿತಿ ನೀಡಿದರು. ಮುಖಂಡರಾದ ಶಿವರಂಜನ ಬೋಳನ್ನವರ, ಡಾ.ಎ.ಎನ್.ಬಾಳಿ, ಬಸವರಾಜ ಶಿರವಂತಿ ಮಾತನಾಡಿದರು.
ವೀರಶೈವ-ಲಿಂಗಾಯತ ಮಹಾಸಭಾ ನಿರ್ದೇಶಕ ಗುರು ಮೆಟಗುಡ್ಡ, ಡಾ.ಮಹಾಂತೇಶ ಗದಗ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ,
ಕಾಂಗ್ರೆಸ್ ಬ್ಲಾಕ್ ಘಟಕ ಅಧ್ಯಕ್ಷ ಮಹಾಂತೇಶ ಕಳ್ಳಿಬಡ್ಡಿ, ಸೋಮನಾಥ ಸೊಪ್ಪಿಮಠ, ಮಹಾಂತೇಶ ಮತ್ತಿಕೊಪ್ಪ, ಈಶ್ವರ ಮೆಟಗುಡ್ಡ, ಅರ್ಜುನ ಕಲಕುಟಕರ, ಶರಣ ಹೂಲಿ, ಶಶಿಧರ ಚಿಕ್ಕೋಡಿ, ಬಸವರಾಜ ಗುರುವನ್ನವರ, ಗೌತಮ ಇಂಚಲ, ಅರ್ಜುನ ಕಲಕುಟಕರ, ಮಹೇಶ ಕೋಟಗಿ, ಶ್ರೀಶೈಲ ಶರಣಪ್ಪನವರ, ಬಸವರಾಜ ದೊಡಮನಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net