ಸಮಾಜದ ಸಮಸ್ತ ಆಗುಹೋಗುಗಳನ್ನು ವಿಶ್ಲೇಷಿಸುವ ಮಹತ್ವದ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ
ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.
ನಗರದಲ್ಲಿ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ಈಚೆಗೆ ಕರ್ನಾಟಕ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಯಾವುದು ತಪ್ಪು, ಯಾವುದು ಸರಿ, ಯಾವುದನ್ನು ಬೆಳೆಸಬೇಕು, ಯಾವುದನ್ನು ತಡೆಯಬೇಕು ಎಂದು ವಿಶ್ಲೇಷಿಸುವ ಮಹತ್ವದ ಹೊಣೆ ಪತ್ರಕರ್ತರ ಮೇಲಿದೆ ಎಂದರು.
ಭದ್ರತೆ ಕಲ್ಪಿಸುವ ವ್ಯವಸ್ಥೆ ರೂಪಿಸಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಪತ್ರಕರ್ತರು
ತಮ್ಮ ಕೌಶಲ ವದ್ಧಿಸಿಕೊಂಡು ಹೊಸ ವ್ಯವಸ್ಥೆಯೊಳಗೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತ ವಿಲಾಸ್ ಜೋಶಿಗೆ ಸಮದರ್ಶಿ ಪ್ರಶಸ್ತಿ, ಶ್ರೀಶೈಲ ಮಠದಗೆ ಹಸಿರು ಕ್ರಾಂತಿ ಪ್ರಶಸ್ತಿ, ಶ್ರೀಕಾಂತ ಕುಬಕಡ್ಡಿಗೆ ಗಡಿ ಕನ್ನಡಿಗ ಪ್ರಶಸ್ತಿ, ರಮೇಶ ಹಿರೇಮಠಗೆ ಲೋಕವಾರ್ತೆ ಪ್ರಶಸ್ತಿ ಮತ್ತು ವೇಣು ಧ್ವನಿ ರೇಡಿಯೋ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿಗೆ ಎರಡನೇ ರಾಜಧಾನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.