ಬೆಳಗಾವಿಯ ಕೆಎಲ್ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಡಾ.ಜ್ಯೋತಿ ಕವಳೇಕರ, ವಿ.ಸಿ.ಕಾಮಗೋಳ, ಡಾ.ಶಿವಾನಂದ ಬುಲಬುಲಿ,ಪ್ರೊ.ಶಶಿಕಾಂತ ತಾರದಾಳೆ ಮತ್ತು ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.
Published on:
Copied
Follow Us
ಪ್ರತಿಯೊಬ್ಬ ಭಾರತೀಯ ದೇಶದ ಬಗ್ಗೆ ಗೌರವ ಹೊಂದಬೇಕು. ದೇಶದ ಏಕತೆ ಮತ್ತು ಅಖಂಡತೆ ಕಾಪಾಡುವ ಜವಾಬ್ದಾರಿ ಯುವಶಕ್ತಿ ಮೇಲಿದೆ ಎಂದು ಕೆಎಲ್ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಅಭಿಪ್ರಾಯಪಟ್ಟರು.
ನಗರದ ಕೆಎಲ್ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಾರಿಯ ಸ್ವಾತಂತ್ರ್ಯೋತ್ಸವ ಹಿಂದಿನ ಆಚರಣೆಗಿಂತ ಭಿನ್ನ ಹಾಗೂ ಐತಿಹಾಸಿಕವಾಗಿದೆ. ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಹಾಗೂ ವಿಕಸಿತ ಭಾರತ 2047 ನಿರ್ಮಾಣದಲ್ಲಿ ಯುವಶಕ್ತಿ ಎಂಬ ಎರಡು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕತವಾಗಿದೆ. ಯುವಕರು ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಸಿ.ಕಾಮಗೋಳ, ಎನ್ಸಿಸಿ ಅಧಿಕಾರಿ ಡಾ.ಶಿವಾನಂದ ಬುಲಬುಲಿ, ಪ್ರೊ.ಶಶಿಕಾಂತ ತಾರದಾಳೆ ಇತರರಿದ್ದರು.