ಸೋಮವಾರ ನವದೆಹಲಿಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ ಮಹಾನಗರವು ಮೂರು ರಾಜ್ಯಗಳ ಗಡಿಗೆ (ಕರ್ನಾಟಕ, ಮಹಾರಾಷ್ಟç, ಗೋವಾ) ಹೊಂದಿಕೊಂಡಿರುವ ಜಿಲ್ಲೆಯಾಗಿದ್ದು, ಇಲ್ಲಿ ವಾಸವಾಗಿರುವ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ನಾಗರಿಕರು ಸೌಹಾರ್ದಯುತವಾಗಿ ಸಹೋದರತ್ವ ಭಾವನೆಯಿಂದ ಸಾಮರಸ್ಯದ ಬದುಕು ನಡೆಸುತ್ತಿದ್ದಾರೆ ಆದರೆ ಕೆಲವು ಸಂಘಟನೆಗಳು ನವೆಂಬರ್ 1 ರ "ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಮತ್ತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಶೇಷ ಅಧಿವೇಶನದ ಸಂದರ್ಭಗಳಲ್ಲಿ ಕರಾಳ ದಿನಾಚರಣೆ ಹಾಗೂ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಇಂತಹ ಪ್ರತಿಭಟನಾ ಸಭೆಗಳಿಗೆ ಪಕ್ಕದ ರಾಜ್ಯದಿಂದ ಹಲವಾರು ನಾಯಕರು ಆಗಮಿಸಿ ಪ್ರಚೋದನಾತ್ಮಕ ಭಾಷಣ ಮಾಡುವ ಕಾರಣ ಅನವಶ್ಯಕ ಗೊಂದಲಗಳು ಉಂಟಾಗುತ್ತವೆ. ಹೀಗಿರುವಾಗ ಜಿಲ್ಲಾಡಳಿತ ಇಲ್ಲಿ ವಾಸವಾಗಿರುವ ಎಲ್ಲ ಭಾಷಿಕ ಜನರ ಹಿತಾಶಕ್ತಿಯನ್ನು ಕಾಪಾಡುವುದು ಅವರ ಮೊದಲ ಆಧ್ಯ ಕರ್ತವ್ಯವಾಗಿರುತ್ತದೆ.