ಬಳಿಕ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಅಥಣಿ ಹಾಗೂ ಜಮಖಂಡಿ ತಾಲೂಕು ಜನರ ಜೀವನಾಡಿಯಾಗಿರುವ ಹಿಪ್ಪರಗಿ ಬ್ಯಾರೇಜ್‌ಗೆ ಗೇಟ್ ಅಳವಡಿಸಿ ನೀರು ಹರಿದು ಹೋಗುವುದನ್ನು ನಿಲ್ಲಿಸಲಾಗಿದೆ. ಶೀಘ್ರವೇ ರಿಪೇರಿ ಮಾಡಿ ಸೂಕ್ತ ಕ್ರಮವಹಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ನೀರಾವರಿ ಇಲಾಖೆ ಅಭಿಯಂತ ಪ್ರವೀಣ ಹುಣಸಿಕಟ್ಟಿ, ಮಾಜಿ ಅಭಿಯಂತ ಅರುಣ ಯಲಗುದ್ರಿ, ಮುಖಂಡ ಪುಂಡಲೀಕ ಪಾಲಬಾವಿ, ಪೊಲೀಸ್ ಇಲಾಖೆ ಅಧಿಕಾರಿಗಳು ಇತರರಿದ್ದರು.