ಇಂದಿರಾ ಕ್ಯಾಂಟೀನ್‌ಗೆ ಹೆಚ್ಚಿದ ಬೇಡಿಕೆ!

ಬೈಲಹೊಂಗಲ ನಗರದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿಊಟಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವುದು.
ಬೈಲಹೊಂಗಲ ನಗರದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿಊಟಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವುದು.
Published on
ಬೆಳಗಾವಿ:ನಗರ ಪ್ರದೇಶಗಳಲ್ಲಿ ಬಡವರ ಹಸಿವು ನೀಗಿಸಲು ಆರಂಭಗೊಂಡಿರುವ ‘ಇಂದಿರಾ ಕ್ಯಾಂಟೀನ್’ ಉಪಹಾರ, ಊಟಕ್ಕೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದ್ದು, ಊಟ ಸವಿವರರ ಸಂರ್ಖಯೆ 8 ರಿಂದ 11 ಸಾವಿರಕ್ಕೆ ಏರಿಕೆ ಕಂಡಿದೆ.
ಹೌದು. ಬೆಳಗಾವಿ ಮಹಾನಗರ ಪಾಲಿಕೆಯ-6, ಗೋಕಾಕ,ಬೈಲಹೊಂಗಲ, ಸವದತ್ತಿ ನಗರಸಭೆ ಹಾಗೂ ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ತಲಾ 1ರಂತೆ ಜಿಲ್ಲೆಯಲ್ಲಿ ಒಟ್ಟು 10 ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿವೆ. ದಿನಕ್ಕೆ ಪ್ರತಿ ಕ್ಯಾಂಟೀನ್‌ನಲ್ಲಿ 11,000 ರಿಂದ 12,500 ಜನ ಬೆಳಗಿನ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಮಾಡುತ್ತಿದ್ದಾರೆ. ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಹೊಸದಾಗಿ ಇಂದಿರಾ ಕ್ಯಾಂಟೀನ್ ಬೇಡಿಕೆ ಹೆಚ್ಚಲು ಪ್ರಮುಖ ಕಾರಣ ಎನ್ನಲಾಗಿದೆ.
ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಆರ್ಥಿಕ ವಹಿವಾಟು ಮಾಸಿಕ ಲಕ್ಷ ರೂ. ದಿಂದ ಕೋಟಿ ರೂ. ಗೆ ಏರಿಕೆ ಕಂಡಿದೆ. ಪ್ರತಿ ದಿನ ಮೂರು ಹೊತ್ತು 1500 ಪ್ಲೇಟ್ ಗುರಿ ನೀಡಲಾಗಿದೆ. ಬೈಲಹೊಂಗಲ, ಗೋಕಾಕ, ಸವದತ್ತಿ, ಹುಕ್ಕೇರಿಯ ಕ್ಯಾಂಟೀನ್‌ನಲ್ಲಿ 2000 ಪ್ಲೇಟ್‌ವರೆಗೆ ಬೇಡಿಕೆ ಬಂದಿದೆ. ಹೀಗಾಗಿ ಸರ್ಕಾರವು ಪ್ರತಿ ದಿನಕ್ಕೆ 2,500 ಪ್ಲೇಟ್ ಹೆಚ್ಚಿಸಬೇಕು. ಜತೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಶೇಷ ಅನುದಾನ ಘೋಷಣೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ನೋಡಲ್ ಅಧಿಕಾರಿ ಮಾಹಿತಿ ಪ್ರಕಾರ ಪ್ರತಿ ದಿನದೊಬ್ಬ ವ್ಯಕ್ತಿಯ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನಕ್ಕೆ ಸೇರಿ ಒಟ್ಟು 61 ರೂ. ದರ ನಿಗದಿಪಡಿದೆ. ಇದರಲ್ಲಿ ಗ್ರಾಹಕರು ಬೆಳಗಿನ ಉಪಹಾರಕ್ಕೆ 5 ರೂ.ಮಧ್ಯಾಹ್ನ, ರಾತ್ರಿ ಊಟಕ್ಕೆ ತಲಾ 10 ರೂ. ದರ ನಿಗದಿ ಪಡಿಸಿದೆ. ಬಾಕಿ ಉಳಿದ 36 ರೂ. ನಗರ ಸ್ಥಳೀಯ ಸಂಸ್ಥೆಗಳು ಪಾವತಿಸುತ್ತಿವೆ. ಹೀಗಾಗಿ ನಿತ್ಯ ಕ್ಯಾಂಟೀನಲ್ಲಿ ಉಪಹಾರ, ಊಟ ಮಾಡುವವ ಪೈಕಿ ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು,ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಿರ್ಗತಿಕರೇ ಹೆಚ್ಚು. ಬೆಳಗ್ಗ ಉಪಹಾರ ಜತೆಗೆ ಕಾಫಿ, ಚಹಾ ಹಾಗೂ ಸಂಜೆ ಸಮಯದಲ್ಲಿ ಚಹಾ, ಸ್ನಾೃಕ್ಸ್ ವ್ಯವಸ್ಥೆ ಮಾಡಬೇಕು. ಬೆಳಗ್ಗೆ 5ಕ್ಕೆ ಆರಂಭಿಸಿ ರಾತ್ರಿ 12 ಗಂಟೆಯವರೆಗೆ ಕ್ಯಾಂಟೀನ್ ತೆರದಿಡುವಂತೆ ಜನರಿಗೆ ಬೇಡಿಕೆ ಬರುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
........................
ಬಾಕ್ಸ್
ಬೆಳಗಾವಿ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ ವಿವರ
ವಿಭಾಗ ಅಂಕಿ ಸಂಖ್ಯೆ
ಕಾರ್ಯನಿರ್ವಹಿಸುತ್ತಿರುವ -10
ಆರಂಭವಾಗಬೇಕಿರುವುದು -33
ಪ್ರತಿ ಹೊತ್ತಿಗೆ - 500 ಪ್ಲೇಟ್
ಬೆಳಗಿನ ಉಪಹಾರಕ್ಕೆ - 5 ರೂ.
ಮಧ್ಯಾಹ್ನ,ರಾತ್ರಿಊಟಕ್ಕೆ - 20 ರೂ.
.......................................
ಕೋಟ್ಸ್
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಇಂದಿರ ಕ್ಯಾಂಟೀನ್ ಬೇಡಿಕೆ ಹೆಚ್ಚುತ್ತಿರುವುದು ನಿಜ. ಜಿಲ್ಲೆಗೆ ಹೊಸದಾಗಿ ಮಂಜೂರು ಮಾಡಿರುವ 33 ಕ್ಯಾಂಟೀನ್ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದ್ದು, ಮಾರ್ಚ್ ಒಳಗಾಗಿ ಕಾರ್ಯರಂಭ ಮಾಡಲಿವೆ.
-ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ
..............
ಕೋಟ್ಸ್
ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಉಪಹಾರ, ಊಟಕ್ಕೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದ್ದು, ಊಟ ಸವಿವರರ ಸಂಖ್ಯೆ ದಿನಕ್ಕೆ 10 ಸಾವಿರ ಗಡಿ ದಾಟಿದೆ. 38 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿವೆ.
-ಮಲ್ಲಿಕಾರ್ಜುನ ಕಲಾದಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net