ಹುಕ್ಕೇರಿ: ರಾಜಕೀಯರಹಿತ ಆಡಳಿತದಿಂದ ಸಹಕಾರ ಕ್ಷೇತ್ರದ ಸದಸ್ಯರ ಹಿತಾಸಕ್ತಿ ಕಾಪಾಡಲು ಸಾಧ್ಯ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಕರ್ನಾಟಕ ಸಹಕಾರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಯೂನಿಯನ್, ಮಲ್ಲಿಕಾರ್ಜುನ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಲ ನೀಡಿ ಕಟ್ಟುನಿಟ್ಟಾಗಿ ಮರುಪಾವತಿಸಿಕೊಂಡಾಗ ಸಹಕಾರ ಕ್ಷೇತ್ರ ಬಲಿಷ್ಠವಾಗುತ್ತದೆ. ಜನರಿಗಾಗಿ ಜನರೇ ರಚಿಸಿಕೊಂಡ ಕ್ಷೇತ್ರ ಇದಾಗಿದ್ದು, ಎಲ್ಲರೂ ರಾಜಕೀಯರಹಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ವಿದ್ಯುತ್ ಸಂಘದ ನಿರ್ದೇಶಕ ವಿನಯ ಪಾಟೀಲ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಸವರಾಜ ಸುಲ್ತಾನಪುರಿ, ಸಹಾಯಕ ನಿಬಂಧಕರಾದ ಜಬಿವುಲ್ಲಾ ಖಾಜಿ, ಗಜಾನನ ಕ್ವಳ್ಳಿ, ಸಿದಗೌಡ ಪಾಟೀಲ, ಪ್ರವೀಣ ಪಾಟೀಲ, ಪರಗೌಡ ಪಾಟೀಲ, ಕಲ್ಲಪ್ಪ ಚೌಗಲಾ ಇತರರಿದ್ದರು.