ಕೃಷಿ ಚಟುವಟಿಕೆಗಳಿಗೆ ಶೀಘ್ರ ನೀರಾವರಿ ಸೌಲಭ್ಯ

ಮಬನೂರ ಗ್ರಾಮದಲ್ಲಿ ಮಲಪ್ರಭಾ ಎಡದಂಡೆ ಕಾಲುವೆಯ ಹಂಚು ಕಾಲುವೆ ಆಧುನೀಕರಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಆರ್.ಕೆ.ಪಟಾತ್, ಪುಂಡಲೀಕ ಮೇಟಿ, ಚಂದ್ರು ಜಂಬ್ರಿ, ಯಲ್ಲಪ್ಪ ನರಿ, ಸಿ.ಬಿ.ಬಾಳಿ, ಪಡೆಪ್ಪ ನರಿ, ಆನಂದ ಪಾಟೀಲ, ಗೋಪಾಲ ಮೇಟಿ ಇತರರಿದ್ದರು.
ಮಬನೂರ ಗ್ರಾಮದಲ್ಲಿ ಮಲಪ್ರಭಾ ಎಡದಂಡೆ ಕಾಲುವೆಯ ಹಂಚು ಕಾಲುವೆ ಆಧುನೀಕರಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಆರ್.ಕೆ.ಪಟಾತ್, ಪುಂಡಲೀಕ ಮೇಟಿ, ಚಂದ್ರು ಜಂಬ್ರಿ, ಯಲ್ಲಪ್ಪ ನರಿ, ಸಿ.ಬಿ.ಬಾಳಿ, ಪಡೆಪ್ಪ ನರಿ, ಆನಂದ ಪಾಟೀಲ, ಗೋಪಾಲ ಮೇಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ವಿಶ್ವಾಸ ವೈದ್ಯ ಮಾಹಿತಿ
  • ಕೆನಾಲ್ ದುರಸ್ತಿ ಕಾರ್ಯಕ್ಕೆ ಭೂಮಿಪೂಜೆ
ತಲ್ಲೂರ:

ಮಲಪ್ರಭಾ ಎಡದಂಡೆ ಕಾಲುವೆಯ ಹಂಚು ಕಾಲುವೆಗಳ ಆಧುನೀಕರಣ ಕಾಮಗಾರಿಯಿಂದ ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಮಬನೂರ ಗ್ರಾಮದಲ್ಲಿ 4.95 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಎಡದಂಡೆ ಕಾಲುವೆಯ ಹಂಚು ಕಾಲುವೆ 4, 5 ಹಾಗೂ 6ರ ಆಧುನೀಕರಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಜತೆಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಗ್ರಾಮಸ್ಥರ ಬೇಡಿಕೆಯಂತೆ ಶೀಘ್ರದಲ್ಲಿ ಮಬನೂರ ಕ್ರಾಸ್‌ನಿಂದ ಮದ್ಲೂರ ಗ್ರಾಮದವರೆಗೆ ರಸ್ತೆ ವಿಸ್ತರಣೆಗೊಳಿಸಿ, ಬೀದಿದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಆರ್.ಕೆ.ಪಟಾತ್ ಮಾತನಾಡಿ, ಕಾಲುವೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿರುವುದು ಕಾಲುವೆ ಭಾಗದ ಎಲ್ಲ ರೈತರಿಗೂ ನೀರು ಒದಗಲಿದೆ ಎಂದರು.
ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಪುಂಡಲೀಕ ಮೇಟಿ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಗ್ರಾಪಂ ಮಾಜಿ ಸದಸ್ಯ ಯಲ್ಲಪ್ಪ ನರಿ, ಪುರಸಭೆ ಮಾಜಿ ಅಧ್ಯಕ್ಷ ಸಿ.ಬಿ.ಬಾಳಿ, ಮುಖಂಡರಾದ ಪಡೆಪ್ಪ ನರಿ, ಆನಂದ ಪಾಟೀಲ, ಗೋಪಾಲ ಮೇಟಿ, ಲಕ್ಷ್ಮಣ ಮುರಗೋಡ, ವಿಠ್ಠಲ ಪಟಾತ್, ಸಿದ್ದಪ್ಪ ಮುರಗೋಡ, ವಿರೂಪಾಕ್ಷ ನರಿ, ಕೀರಪ್ಪ ಹಟ್ಟಿ, ಪುಂಡಲೀಕ ಮಳಗಲಿ, ಎಲ್.ಸಿ.ಮುರಗೋಡ, ನಾಗನಗೌಡ ಪಾಟೀಲ, ಹನುಮಂತ ಅಗಸಿಮನಿ, ಗುತ್ತಿಗೆದಾರ ಎಂ.ಎಸ್.ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net