ಜಿಲ್ಲೆಯಲ್ಲಿರುವ ಒಟ್ಟು 38 ನಗರ ಸ್ಥಳೀಯ ಆಡಳಿತ ಮಂಡಳಿ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶಿಸಲು ಮಾರುಕಟ್ಟೆ ಪ್ರದೇಶ, ವೃತ್ತಗಳು, ಕೈಗಾರಿಕೆ ಪ್ರದೇಶ, ಮುಖ್ಯ ರಸ್ತೆ, ಉದ್ಯಾನಗಳು ಸೇರಿದಂತೆ 430ಕ್ಕೂ ಹೆಚ್ಚು ಜಾಗಗಳನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಆದರೆ, ವಾಸ್ತವವಾಗಿ ಜಿಲ್ಲೆಯಲ್ಲಿನ ಒಂದೊಂದು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 50ರಿಂದ 150ಕ್ಕೂ ಹೆಚ್ಚು ಜಾಹೀರಾತು ಫಲಕಗಳನ್ನು ಅನಧಿಕೃತವಾಗಿ ಅಳವಡಿಸಲಾಗಿದೆ. ಇದರಿಂದ ವಾರ್ಷಿಕ ಕೋಟ್ಯಂತರ ರೂ. ಜಾಹೀರಾತು ತೆರಿಗೆ ನಷ್ಟವಾಗುತ್ತಿದೆ.