೩೦ರಂದು ಮೂರ್ತಿ ಪ್ರತಿಷ್ಠಾಪನೆ

ಅಥಣಿ ಪಟ್ಟಣದಲ್ಲಿ ಶ್ರೀ ಬಾಳುಮಾಮಾ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ವಿಠ್ಠಲ ತಟ್ರೆ, ಅಪ್ಪು ಪೂಜಾರಿ, ಕಲ್ಲಪ್ಪ ಮೇತ್ರಿ, ಸುರೇಶ ವಾಘಮೋಡೆ, ಆನಂದ ಮಾಕಾಣಿ ಇತರರಿದ್ದರು.
ಅಥಣಿ ಪಟ್ಟಣದಲ್ಲಿ ಶ್ರೀ ಬಾಳುಮಾಮಾ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ವಿಠ್ಠಲ ತಟ್ರೆ, ಅಪ್ಪು ಪೂಜಾರಿ, ಕಲ್ಲಪ್ಪ ಮೇತ್ರಿ, ಸುರೇಶ ವಾಘಮೋಡೆ, ಆನಂದ ಮಾಕಾಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಠ್ಠಲ ತಟ್ರೆ ಮಾಹಿತಿ
  • ಆಮಂತ್ರಣ ಪತ್ರಿಕೆ ಬಿಡುಗಡೆ

ಅಥಣಿ: ಹೊರವಲಯದ ಮಲ್ಲಟ್ಟಿಕೋಡಿ ಸಂಗೊಳ್ಳಿ ರಾಯಣ್ಣ ನಗರದಲ್ಲಿ ನಿರ್ಮಿಸಿರುವ ಶ್ರೀ ಬಾಳುಮಾಮಾ ದೇವಸ್ಥಾನದಲ್ಲಿ ಆ.೩೦ರಂದು ಬೆಳಗ್ಗೆ ೯ ಗಂಟೆಗೆ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ನಡೆಯಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ವಿಠ್ಠಲ ತಟ್ರೆ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ಪವಾಡ ಮಾಡಿರುವ ಬಾಳುಮಾಮಾ ಅವರನ್ನು ಭಕ್ತರು ಶಿವನ ಅವತಾರ, ಪವಾಡ ಪುರುಷ ಎಂದು ಆರಾಧಿಸುತ್ತಾರೆ. ಕನ್ನಡ ನಾಡಿನಲ್ಲಿ ಜನಿಸಿ ಮಹಾರಾಷ್ಟçದಲ್ಲಿ ದೇಹತ್ಯಾಗ ಮಾಡಿದ ಅವರಿಗೆ ದೇಶಾದ್ಯಂತ ಅಪಾರ ಭಕ್ತರಿದ್ದಾರೆ. ಬಾಳುಮಾಮಾ ಅವರ ಮೇಲಿನ ಶ್ರದ್ಧೆ ಹಾಗೂ ಭಕ್ತಿಯಿಂದ ಮಲ್ಲಟ್ಟಿಕೋಡಿ ಗ್ರಾಮದ ಭಕ್ತರೆಲ್ಲರೂ ಸೇರಿ ದೇವಸ್ಥಾನ ನಿರ್ಮಿಸಿದ್ದಾರೆ ಎಂದರು.
ಕಲಾವಿದ ಸುರೇಶ ವಾಘಮೋಡೆ ಮಾತನಾಡಿ, ಆ.೩೦ರಂದು ಬೆಳಗ್ಗೆ ೮ ಗಂಟೆಗೆ ಅಥಣಿ ಪಟ್ಟಣದ ಶ್ರೀ ದಡ್ಡಿಸಿದ್ಧೇಶ್ವರ ದೇವಸ್ಥಾನದಿಂದ ಶ್ರೀ ಬಾಳುಮಾಮಾ ದೇವರ ಮೂರ್ತಿ ಮೆರವಣಿಗೆ ನಡೆಯಲಿದೆ.
ಅಥಣಿಯ ಶೆಟ್ಟರ ಮಠದ ಮರಳಸಿದ್ಧ ಸ್ವಾಮೀಜಿ, ಕವಲಗುಡ್ಡ-ಹಣಮಾಪುರದ ಅಮರೇಶ್ವರ ಮಹಾರಾಜರು, ಶಶಿಕಾಂತ ಗುರೂಜಿ, ಮಾಳಿಂಗರಾಯ ಮಹಾರಾಜರು, ಸದಾಶಿವ ಅಜ್ಜನವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು. ಅಪ್ಪು ಪೂಜಾರಿ, ಕಲ್ಲಪ್ಪ ಮೇತ್ರಿ, ಸುರೇಶ ವಾಘಮೋಡೆ, ಆನಂದ ಮಾಕಾಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net