ಮಹನೀಯರ ಆದರ್ಶ ಪಾಲಿಸಿ

ಅಥಣಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮುರುಗೆವ್ವ ಗಡಾಲೋಟಿ, ಗೀತಾ ತೋರಿ ಮೋನಿಕಾ ತಾಂಬಟ ಇತರರಿದ್ದರು.
ಅಥಣಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮುರುಗೆವ್ವ ಗಡಾಲೋಟಿ, ಗೀತಾ ತೋರಿ ಮೋನಿಕಾ ತಾಂಬಟ ಇತರರಿದ್ದರು.
Published on
ಅಥಣಿ: ಕಿತ್ತೂರು ಚನ್ನಮ್ಮ, ಅಕ್ಕಮಹಾದೇವಿ, ಸಾವಿತ್ರಿಬಾಯಿ ಫುಲೆ, ಸಾಲುಮರದ ತಿಮ್ಮಕ್ಕನಂತಹ ಮಹನೀಯರ ಆದರ್ಶಮಯ ಜೀವನ ನಡೆಸಬೇಕು ಎಂದು ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮುರಗೆವ್ವ ಗಡಾಲೋಟಿ ಹೇಳಿದರು.
ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಮಹಿಳಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ವೇದಿಕೆಯಿಂದ ಭಾನುವಾರ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಗೀತಾ ಚೌಧರಿ, ಪೂರ್ಣಿಮಾ ಪಾಂಗಿ, ಆಶಾ ಪಾಟೀಲ, ಸುರೇಖಾ ಜಕನೂರ ಮಾತನಾಡಿದರು. ಚಂದುಕಾಕಾ ಜುವೆಲರ್ಸ್ನ ಮೋನಿಕಾ ತಾಂಬಟ ವಿಶೇಷ ಲಕ್ಕಿ ಡ್ರಾ ಕೂಪನ್ ವಿತರಿಸಿದರು.
ಶೀತಲ ಬಡಕಂಬಿ, ರೋಹಿಣಿ ಗುಡೋಡಗಿ, ರಚನಾ ಬಿಳ್ಳೂರ, ಸುವರ್ಣಾ ಸೊಳಸಿ, ಗೀತಾ ತೋರಿ, ಜಯಶ್ರೀ ಸೊನಕರ, ಸುಜಾತಾ ಕುಲಕರ್ಣಿ, ಎ.ವೈ.ಹೈಬತ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net