

ಪ್ರಮುಖ ಮುಖ್ಯಾಂಶಗಳು
ಅಥಣಿ:
ಮಹಾತ್ಮರು, ಸಂತರು, ಬಸವಾದಿ ಶಿವಶರಣರು ಸತ್ಯದ ದಾರಿಯಲ್ಲಿ ನಡೆದು ನಾಡಿಗೆ ಬೆಳಕಾಗಿದ್ದಾರೆ. ಅಂತಹ ಮಹನೀಯರ ಸಾಲಿನಲ್ಲಿ ಅಥಣಿ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳೂ ಒಬ್ಬರಾಗಿದ್ದಾರೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಬಸವಣ್ಣನವರು ವಚನಗಳನ್ನು ಚಾಚೂ ತಪ್ಪದೆ ಪಾಲಿಸಿದ ಮುರುಘೇಂದ್ರ ಶಿವಯೋಗಿಗಳನ್ನು ನಾಡಿನ ಎಲ್ಲ ಮಠಾಧೀಶರು ಗೌರವದಿಂದ ಕಾಣುತ್ತಾರೆ. ತಪಶಕ್ತಿಯ ಫಲದಿಂದ ಈ ನೆಲ ಪಾವನವಾಗಿ ಪುಣ್ಯ ಕ್ಷೇತ್ರವಾಗಿದೆ ಎಂದರು.