ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಆತ್ಮಹತ್ಯೆ
ಆತ್ಮಹತ್ಯೆ
Published on
ಚಿಕ್ಕೋಡಿ: ಕೌಟುಂಬಿಕ ಕಲಹಕ್ಕೆ ಬೆಸತ್ತು ಗೃಹಿಣಿ ನಾಗರಾಳ ಗ್ರಾಮದ ಉಮಾಶ್ರೀ ಹೆಗ್ಗಣ್ಣವರ (24) ನೇಣು ಬಿಗಿದುಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಆತ್ಮಹತ್ಯೆ ಸುದ್ದಿ ಕೇಳಿ ಮನನೊಂದ ಪತಿ ಲಗಮಣ್ಣ ಹೆಗ್ಗಣ್ಣವರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಮಾಶ್ರೀ ಮತ್ತು ಲಗಮಣ್ಣ ಒಂದೂವರೇ ವರ್ಷದ ಹಿಂದೆ ವಿವಾಹವಾಗಿದ್ದರು. ಆತ್ಮಹತ್ಯೆಗೆ ಪತಿಯ ಕುಟುಂಬಸ್ಥರ ಕಿರುಕುಳವೇ ಕಾರಣ ಎಂದು ಉಮಾಶ್ರೀ ಪಾಲಕರು ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net