

ಹಲಸಿ ವಿಶೇಷ: ಮಧ್ಯಕಾಲೀನ ದೇವಾಲಯಗಳಿಂದ ಸುಪ್ರಸಿದಟಛಿವಾಗಿರುವ ಹಲಸಿಯ ಪ್ರಾಚೀನ ಹೆಸರು ಪಲಾಸಿಕಾ. ಇಲ್ಲಿನ ದೇವಾಲಯಗಳು ಪುರಾತತ್ವ ಇಲಾಖೆ ಉಸ್ತುವಾರಿಯಲ್ಲಿವೆ. ಕಲ್ಮೇಶ್ವರ, ಸುವರ್ಣೇಶ್ವರ, ರಾಮಲಿಂಗೇಶ್ವರ, ಭೂವರಾಹ ಲಕ್ಷ್ಮೀನರಸಿಂಹ ಹಾಗೂ ದಿಗಂಬರ ಜೈನ ಬಸದಿ ಇಲ್ಲಿನ ಪ್ರಮುಖ ದೇವಸ್ಥಾನಗಳು. ಇಲ್ಲಿ ಅತ್ಯಮೂಲ್ಯ ಶಿಲ್ಪಕಲಾಕೃತಿಗಳಿವೆ. ಈ ಕುರಿತು ಸಂಶೋಧಕರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಇದಲ್ಲದೆ, ಹಲಸಿಯಲ್ಲಿ ಕದಂಬರು ಸೇರಿದಂತೆ ವಿವಿಧ ಆಳ್ವಿಕೆಗಾರರ ವಿವರಗಳನ್ನೊಳಗೊಂಡ ಹಲವು ಶಾಸನಗಳು ಲಭಿಸಿವೆ.
ವಿವಿಧ ಸಂಘಟನೆಗಳ ಹೋರಾಟದ ಲವಾಗಿ ದಶಕದ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕದಂಬೋತ್ಸವ ಆರಂಭಗೊಂಡಿತ್ತು. ಸೋಮವಾರ ನಂದಗಡಕ್ಕೆ ಮುಖ್ಯಮಂತ್ರಿ ಭೇಟಿ ನೀಡಲಿದ್ದು,ಹಲಸಿ ಕದಂಬೋತ್ಸವ ಪುನರಾರಂಭಿಸುವಂತೆ ಮನವಿ ಸಲ್ಲಿಸುತ್ತೇವೆ.