ತಾಂತ್ರಿಕ ವಿದ್ಯಾರ್ಥಿಗಳಿಗೆ ಹ್ಯಾಕಥಾನ್ ಆಯೋಜನೆ

ನಿಪ್ಪಾಣಿಯ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಾಕೌರಾ-೨೦೨೬ ಮೇಳದ ವಿಜೇತರಿಗೆ ಪಪ್ಪು ಪಾಟೀಲ ಬಹುಮಾನ ವಿತರಿಸಿದರು. ಸಮೀರ ಬಾಗೇವಾಡಿ, ಡಾ.ಸಿದ್ಧಗೌಡ ಪಾಟೀಲ, ಡಾ.ಉಮೇಶ ಪಾಟೀಲ ಇತರರಿದ್ದರು.
ನಿಪ್ಪಾಣಿಯ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಾಕೌರಾ-೨೦೨೬ ಮೇಳದ ವಿಜೇತರಿಗೆ ಪಪ್ಪು ಪಾಟೀಲ ಬಹುಮಾನ ವಿತರಿಸಿದರು. ಸಮೀರ ಬಾಗೇವಾಡಿ, ಡಾ.ಸಿದ್ಧಗೌಡ ಪಾಟೀಲ, ಡಾ.ಉಮೇಶ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಪ್ಪು ಪಾಟೀಲ ಮಾಹಿತಿ
  • ಹಾಕೌರ ಮೇಳ ಸಮಾರೋಪ ಸಮಾರಂಭ, ಬಹುಮಾನ ವಿತರಣೆ
ನಿಪ್ಪಾಣಿ: ಮುಂಬರುವ ದಿನಗಳಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಯುವ ಆವಿಷ್ಕಾರಕರನ್ನು ಪರಿಚಯಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆಯೋಜಿಸಲಾಗುವುದು ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳ ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಹೇಳಿದರು.
ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ ವಿಕ್ರಮ ಸಾರಭಾಯಿ ಟೆಕ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಈಚೆಗೆ ಹಮ್ಮಿಕೊಂಡಿದ್ದ ಹಾಕೌರಾ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ತಂಡಗಳು ಅದ್ಭುತ ಡಿಜಿಟಲ್ ನಾವಿನ್ಯ ಪ್ರದರ್ಶಿಸಿದ್ದು, ಪ್ರಗತಿಯ ದಿಕ್ಸೂಚಿಯಾಗಿದೆ ಎಂದರು.
ಒಟ್ಟು ೮೨ ತಂಡಗಳಲ್ಲಿ ೪ ತಂಡಗಳು ವಿಜೇತ ಮತ್ತು ೫ ತಂಡಗಳು ರನ್ನರ ಅಪ್ ಆಗಿ ಸಮಾರು ೧ ಲಕ್ಷ ರೂ. ಬಹುಮಾನ ಗಿಟ್ಟಿಸಿಕೊಂಡವು. ಜನರೇಟಿವ್ ಎಐ ಡೊಮೇನ್‌ನಲ್ಲಿ ವರೂರ್‌ನ ಎಜಿಎಂಆರ್ ಮಹಾವಿದ್ಯಾಲಯದ ಇನ್ನೋವೇಟಿವ್ ಎಕ್ಸ್ ತಂಡ (ವಿಜೇತ), ವಿಎಸ್‌ಎಂಎಸ್‌ಆರ್‌ಕೆಐಟಿಯ ಹ್ಯಾಕ್ ಹಸ್ಲರ್ಸ್ ತಂಡ (ರನ್ನರ್‌ಅಪ್), ಸೈಬರ್ ಸೆಕ್ಯೂರಿಟಿ ಡೊಮೇನ್‌ನಲ್ಲಿ ಬೆಳಗಾವಿಯ ಜೆಸಿಇಆರ್ ಮಹಾವಿದ್ಯಾಲಯದ ಟೀಂ ಆಸ್ಟಾç ತಂಡ (ವಿಜೇತ), ಕೆಎಲ್‌ಇ ಸಂಸ್ಥೆಯ ಗೋಕಾಕನ ಬಿಸಿಎ ಮಹಾವಿದ್ಯಾಲಯದ ಡಾಮಿನೇಟರ್ಸ್ ತಂಡ (ರನ್ನರ್‌ಅಪ್), ಐಒಟಿ ಡೊಮೇನ್‌ನಲ್ಲಿ ಬೆಳಗಾವಿಯ ಜೆಸಿಎಆರ್ ಮಹಾವಿದ್ಯಾಲಯದ ಹೈವಿಂಗ್ಸ್ ತಂಡ (ವಿಜೇತ), ಮೆಡಿಟೆಕ್ ತಂಡ (ರನ್ನರ್‌ಅಪ್) ಮತ್ತು ಕೆಎಲ್‌ಇ ಸಂಸ್ಥೆಯ ಚಿಕ್ಕೋಡಿಯ ತಾಂತ್ರಿಕ ಮಹಾವಿದ್ಯಾಲಯದ ಸರ್ಕ್ಯೂಟ್ ನೋವಾ ತಂಡ (ರನ್ನರ್‌ಅಪ್), ಫುಲ್ ಸ್ಟಾಕ್ ಡೊಮೇನ್‌ನಲ್ಲಿ ಬೆಳಗಾವಿಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಫ್ಯಾಂಟಮ್ ಕ್ರೀವ್ ತಂಡ (ವಿಜೇತ), ಹುಲಕೋಟಿಯ ಆರ್‌ಇಸಿ ಮಹಾವಿದ್ಯಾಲಯದ ಸ್ಮಾರ್ಟ್ ಹ್ಯಾಕರ್ಸ್ ತಂಡ (ರನ್ನರ್‌ಅಪ್) ಪ್ರಶಸ್ತಿ ಪಡೆದರು. ವಿಜೇತರಿಗೆ ಗಣ್ಯರು ಪ್ರಮಾಣಪತ್ರ, ನಗದು ಬಹುಮಾನ ವಿತರಿಸಿದರು.
ಬೆಳಗಾವಿಯ ಜೆಸಿಎಆರ್ ಮಹಾವಿದ್ಯಾಲಯದ ಡಾ.ರಾಘವೇಂದ್ರ ಕಟಗಲಿ, ಡಾ.ವಿದ್ಯಾ ದಂಡಗಿ, ಪ್ರೊ.ಬಸವರಾಜ ಚೌಗುಲಾ, ಡಾ.ಸುನೀಲ ಶಿಂಧೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪಿಎಚ್.ಡಿ ಪಡೆದ ಡಾ.ವಿದ್ಯಾ ದಂಡಗಿ ಮತ್ತು ಡಾ.ಸುನೀಲ ಶಿಂಧೆ ಅವರನ್ನು ಸನ್ಮಾನಿಸಲಾಯಿತು. ಮಂಡಳದ ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಿಇಒ ಡಾ.ಸಿದ್ಧಗೌಡ ಪಾಟೀಲ, ಪ್ರಾಚಾರ್ಯ ಡಾ.ಉಮೇಶ ಪಾಟೀಲ, ಪ್ರೊ.ಪ್ರಭು ಖಿಚಡಿ, ಎಸ್.ಸಿ.ಗಂಧ, ವಿದ್ಯಾರ್ಥಿ ಸಂಯೋಜಕ ಮುದಸ್ಸರ್ ಅಲ್ಲಾಲಖಾನ್, ಸಂದೇಶ ಬೀರನ್ನವರ, ರಕ್ಷಿತಾ ಹಲ್ಲುರಿ, ನಿತ್ಯಶ್ರೀ ಜೈನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net