ಗುರು ಮಡಿವಾಳೇಶ್ವರ ರಥೋತ್ಸವ ಅದ್ದೂರಿ

 ಬೈಲಹೊಂಗಲದಲ್ಲಿ ಶ್ರೀ ಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಭಕ್ತರ ಹರ್ಷೋದ್ಗಾರದ ನಡುವೆ ಸಂಭ್ರಮದಿಂದ ಜರುಗಿತು.
ಬೈಲಹೊಂಗಲದಲ್ಲಿ ಶ್ರೀ ಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಭಕ್ತರ ಹರ್ಷೋದ್ಗಾರದ ನಡುವೆ ಸಂಭ್ರಮದಿಂದ ಜರುಗಿತು.
Published on
ವಿವಿಧ ವಾದ್ಯಗಳೊಂದಿಗೆ ದೇವಸ್ಥಾನ ಆವರಣದಿಂದ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಬಸವೇಶ್ವರ ವೃತ್ತ, ಮೂಗಿ ಗಲ್ಲಿ, ಬಜಾರ ರಸ್ತೆ ಮೂಲಕ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತದ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನ ತಲುಪಿತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಠದ ಪೀಠಾಧಿಪತಿ ಮಡಿವಾಳೇಶ್ವರ ಸ್ವಾಮೀಜಿ, ಗದಿಗೆಯ್ಯ ರುದ್ರಾಕ್ಷಿಮಠ ರಥಕ್ಕೆ ಪೂಜೆ ಸಲ್ಲಿಸಿದರು. ರಥಕ್ಕೆ ಮಾಲೆ ಸಮರ್ಪಿಸಿ ರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ರಥದಲ್ಲಿ ಮಡಿವಾಳೇಶ್ವರ ಬೆಳ್ಳಿಮೂರ್ತಿ ಹಾಗೂ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ರುದ್ರಾಕ್ಷಿ, ವಿವಿಧ ಹೂವಿನ ಮಾಲೆಗಳು ಹಾಗೂ ಕೆಂಪು-ಬಿಳಿ ಧ್ವಜಗಳಿಂದ ಅಲಂಕೃತಗೊಂಡ ರಥ ಕಲಶ, ಬೆಳ್ಳಿ ನವಿಲು, ದೇವಿ ಹಾಗೂ ಮಡಿವಾಳೇಶ್ವರರ ಭಾವಚಿತ್ರಗಳಿಂದ ಸಿಂಗಾರಗೊಂಡಿತ್ತು.
ಭಕ್ತರು ರಥಕ್ಕೆ ಹೂವು, ಹಣ್ಣು, ಕಾರೀಕು ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಜವಳಿ ಕೂಟದಿಂದ ಆರಂಭವಾದ ರಥೋತ್ಸವ ಬಜಾರ ರಸ್ತೆ, ಮೇದಾರ ಗಲ್ಲಿ ಮಾರ್ಗವಾಗಿ ಶ್ರೀ ಮಠ ತಲುಪಿತು. ಡೊಳ್ಳು, ಜಗ್ಗಲಗಿಮೇಳ ಸೇರಿ ವಿವಿಧ ವಾದ್ಯಮೇಳ ರಥೋತ್ಸವಕ್ಕೆ ಮೆರುಗು ತಂದವು.
ಸಣ್ಣಬಸಪ್ಪ ಕುಡಸೋಮಣ್ಣವರ, ಮಹಾಂತೇಶ ಅಕ್ಕಿ, ಈಶ್ವರ ಕೊಪ್ಪದ, ಪಿ.ಬಿ.ಕಡಕೋಳ, ಕೀರಪ್ಪ ಮಡೆನ್ನವರ, ಶಿವಾನಂದ ಹತ್ತರಕಿ, ಗಿರೀಶ ಪಾಟೀಲ, ಬಸವರಾಜ ಕಲಾದಗಿ, ವಿಜಯ ಬೆಳವಡಿ, ಮಹಾಬಳೇಶ್ವರ ಕಡಕೋಳ,
ಮಲ್ಲಿಕಾರ್ಜುನ ಕಮತಗಿ, ಆದಿತ್ಯ ಪುಂಡಿ, ಅಭಯ ಪುಂಡಿ,
ಈರಪ್ಪ ಹಲಕಿ, ಮಹಾಂತೇಶ ಬಡಿಗೇರ, ಚಿದಂಬರ ಲಮಾಣಿ, ಚಿಕ್ಕಸೋಮಯ್ಯ ಗುಡದೂರಮಠ, ಬಸವರಾಜ ಹಳ್ಳೂರ, ಬಸವರಾಜ ಶಿವಾಪುರ, ಮಲ್ಲಿಕಾರ್ಜುನ ಮಡಿವಾಳರ, ಬಸವರಾಜ ಹುಲಕುಂದ, ಬಿ.ವೈ.ತಳವಾರ, ಮಹಾಂತೇಶ ಹಣಶಿ, ಮಂಜು ಕುಲಕರ್ಣಿ, ಅಭಿಷೇಕ ಮಡ್ಡೆನ್ನವರ, ಮಡಿವಾಳ ಕಲಾದಗಿ, ವಿಶಾಲ ಮಡ್ಡೆನ್ನವರ, ಕಿರಣ ನಾಯ್ಕರ, ಶಿವು ಪಡತಾರ, ಭಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net