ಪಾಲಬಾವಿ ನಿಧಿ ವದಂತಿ ಸುಳ್ಳು
| ತಹಶೀಲ್ದಾರ ಮಹಾದೇವ ಸನಮೂರಿ ಸ್ಪಷ್ಟನೆ
ಚಿಕ್ಕೋಡಿ: ರಾಯಬಾಗ ತಾಲೂಕಿನ ಪಾಲಬಾವಿ ಗ್ರಾಮದ ಜಮೀನಿನಲ್ಲಿ ನಿಧಿ ಸಿಕ್ಕಿದೆ ಎಂಬ ವದಂತಿ ಗ್ರಾಮದ ಜನರ ಕೂತುಹಲಕ್ಕೆ ಕಾರಣವಾಗಿತ್ತು. ಈ ಕುರಿತು ತಾಲೂಕ ಆಡಳಿತ ಇದು ಕೇವಲ ವದಂತಿ ಗ್ರಾಮದಲ್ಲಿ ಯಾವುದೇ ನಿಧಿ ಸಿಕ್ಕಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಪಾಲಬಾವಿ ಗ್ರಾಮದಲ್ಲಿ ಆನಂದ ಬಾಬು ನಿಂಗನೂರ ಎಂಬುವವರ ಜಮೀನಿನಲ್ಲಿ ಕಳೆದ ಒಂದು ವಾರದ ಹಿಂದೆ ಜಮೀನಿನಲ್ಲಿ ಮಣ್ಣು ಅಗೆಯುವಾಗ 3 ಕೆಜಿ ಬಂಗಾರ ನಿಧಿ ಸಿಕ್ಕಿದೆ ಎಂದು ಪ್ರಕಾಶ ನಿಂಗನೂರಿ ಎಂಬುವವರು ಹಾರೂಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಆದರೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ,ನಮಗೆ ನಿಧಿ ಸಿಕ್ಕಿಲ್ಲ ಎಂದು ನಿಧಿ ಸಿಕ್ಕಿದೆ ಎನ್ನಲಾದ ಜಮೀನಿನ ಮಾಲೀಕ ಆನಂದ ಬಾಬು ನಿಂಗನೂರಿ ಹೇಳಿದ್ದಾರೆ.
ರಾಯಬಾಗ ತಹಶಿಲ್ದಾರ ಮಹಾದೇವ ಸನಮೂರಿ ನಿಧಿ ಸಿಕ್ಕಿದೆ ಎನ್ನಲಾದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯಾವುದೇ ನಿಧಿ ದೊರೆತಿಲ್ಲ,ಒಬ್ಬರು ಒಂದೊಆದು ರೀತಿ ಹೇಳುತ್ತಿದ್ದಾರೆ. ನಿಧಿ ಸಿಕ್ಕಿದೆ ಎಂಬುವುದು ಕೇವಲ ವದಂತಿ ಎಂದು ಸ್ಪಷ್ಟ ಪಡಿಸಿದ್ದಾರೆ.