ನಿರಂತರ ಓದಿನಿಂದ ಗುರಿ ಸಾಧನೆ ಸಾಧ್ಯ

ಕೇರೂರ ಗ್ರಾಮದ ಹಳಕೇರಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಚಂದ್ರಶೇಖರ ಅರಬಾವಿ, ಬಿ.ಎನ್. ಪಾಟೀಲ, ಬಬಿತಾ ನೂಲಿ, ಶಿವಾನಂದ ರೇಂದಾಳೆ, ಸಂಜಯ ನಾಯಿಕ, ಮೌಲಾಲಿ ಮುಲ್ಲಾ ಇತರರಿದ್ದರು.

Published on
ಚಿಕ್ಕೋಡಿ: ವಿದ್ಯಾರ್ಥಿಗಳು ಹೆಚ್ಚಿನ ಸಮಯ ಅಧ್ಯಯನಶೀಲರಾಗಿ ಓದಿದಾಗ ಮಾತ್ರ ತಮ್ಮ ಗುರಿ ಸಾಧನೆ ಸಾಧ್ಯ. ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿ ಕಲಿತು ನಾಡಿಗೆ ಕೀರ್ತಿ ತರುವಂತ ಪ್ರಜೆಗಳಾಗಬೇಕು ಎಂದು ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಅರಬಾವಿ ಅಭಿಪ್ರಾಯಪಟ್ಟರು.
ತಾಲೂಕಿನ ಕೇರೂರ ಗ್ರಾಮದ ಹಳಕೇರಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಕೀಲ ಬಿ.ಎನ್.ಪಾಟೀಲ ಮಾತನಾಡಿ, ಪರೀಕ್ಷೆ ಸಮಯದಲ್ಲಿ ಮಕ್ಕಳು ಮೊಬೈಲ ಟಿವಿಯಿಂದ ದೂರವಿರುವಂತೆ ಪಾಲಕರು ನೋಡಿಕೊಳ್ಳಬೇಕು ಎಂದು ಸಲಹೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಬಬಿತಾ ನೂಲಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ರೇಂದಾಳೆ, ಸಂಜಯ ನಾಯಿಕ, ಮೌಲಾಲಿ ಮುಲ್ಲಾ, ಮಹಾಂತೇಶ ನೂಲಿ, ಸಂಜಯ ಪರಗೌಡರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net