ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಿ

ಬೆಳಗಾವಿ ತಾಲೂಕಿನ ಮಚ್ಛೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಗಣ್ಯರು ದೀಪ ಬೆಳೆಗಿದರು. ಸತೀಶ ನಾಯ್ಕ, ಡಾ.ನಿರ್ಮಲಾ ಬಟ್ಟಲ್, ಚಾರುಕೀರ್ತಿ ಸಾಯಿಬಣ್ಣವ, ಡಾ.ವಿದ್ಯಾ ಪಾಟೀಲ, ರಾಜು ಬೆಲ್ಲದ ಇತರರಿದ್ದರು.
ಬೆಳಗಾವಿ ತಾಲೂಕಿನ ಮಚ್ಛೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಗಣ್ಯರು ದೀಪ ಬೆಳೆಗಿದರು. ಸತೀಶ ನಾಯ್ಕ, ಡಾ.ನಿರ್ಮಲಾ ಬಟ್ಟಲ್, ಚಾರುಕೀರ್ತಿ ಸಾಯಿಬಣ್ಣವ, ಡಾ.ವಿದ್ಯಾ ಪಾಟೀಲ, ರಾಜು ಬೆಲ್ಲದ ಇತರರಿದ್ದರು.
Published on
ಬೆಳಗಾವಿ: ಮಹಿಳೆಯರು ಸ್ವ-ಉದ್ಯೋಗದಲ್ಲಿ ಕೌಶಲ ಅಳವಡಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ್ ಹೇಳಿದರು.
ತಾಲೂಕಿನ ಮಚ್ಛೆ ಗ್ರಾಮದ ಸಪ್ತಪದಿ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ 3ನೇ ಘಟಕ, ಜ್ಞಾನವಿಕಾಸ ಕೇಂದ್ರ ಹಾಗೂ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾವಲಂಬಿ ಜೀವನಕ್ಕೆ ಆದ್ಯತೆ ನೀಡಲು ಧರ್ಮಸ್ಥಳ ಯೋಜನೆ ಪ್ರಾರಂಭಿಸಲಾಗಿದೆ. ಇದರಿಂದ ಮಹಿಳೆಯರು ಸಾಮಾಜಿಕ, ಆರ್ಥಿಕ, ಧಾರ್ಮಿಕವಾಗಿ ಸಬಲರಾಗಲು ಸಾಧ್ಯವಾಗಿದೆ ಎಂದರು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಚಾರುಕೀರ್ತಿ ಸಾಯಿಬಣ್ಣನವರ, ಡಾ.ವಿದ್ಯಾ ಪದ್ಮಾರಾಜ ಪಾಟೀಲ, ಕಸ್ತೂರಿ ಕೋಲ್ಕಾರ, ರಾಜು ಬೆಲ್ಲದ, ಯೋಜನಾಧಿಕಾರಿ ಪಾರ್ವತಿ, ವಿಮೆ ಸಮನ್ವಯಾಧಿಕಾರಿ ಧನಂಜಯ, ಮೇಲ್ವಿಚಾರಕ ರಮೇಶ, ವನಿತಾ, ಶೈನಾಝ್, ದೀಪಿಕಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net