ವಿದ್ಯಾರ್ಥಿಗಳಿಗೆ ಪರಿಜ್ಞಾನ ನೀಡಿ

ಐಗಳಿ ಆದರ್ಶ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಸಿ.ಎಸ್. ನೇಮಗೌಡ, ಎಸ್.ಎಸ್. ಪೊಲೀಸ್‌ಪಾಟೀಲ, ಶಕುಂತಲಾ ಪಾಟೀಲ ಇತರರಿದ್ದರು.
ಐಗಳಿ ಆದರ್ಶ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಸಿ.ಎಸ್. ನೇಮಗೌಡ, ಎಸ್.ಎಸ್. ಪೊಲೀಸ್‌ಪಾಟೀಲ, ಶಕುಂತಲಾ ಪಾಟೀಲ ಇತರರಿದ್ದರು.
Published on
ಐಗಳಿ: ಮಕ್ಕಳಿಗೆ ಬದುಕುವ ಕಲೆಯ ಪರಿಜ್ಞಾನ ನೀಡಬೇಕು. ಅಂಕ ಗಳಿಕೆಗೆ ಸೀಮಿತವಾಗಿದ್ದವರು ಬದುಕಿನಲ್ಲಿ ಎಡುವುತ್ತಿದ್ದಾರೆ ಎಂದು ಮುಖಂಡ ಸಿ.ಎಸ್.ನೇಮಗೌಡ ಹೇಳಿದರು.
ಇಲ್ಲಿನ ಆದರ್ಶ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಎಸ್.ಎಸ್.ಪೊಲೀಸ್‌ಪಾಟೀಲ, ಕಲ್ಮೇಶ ಆಸಂಗಿ, ಎ.ಎಸ್.ತೆಲಸಂಗ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು. ಮುಖ್ಯಶಿಕ್ಷಕ ಡಿ.ಎಲ್.ಕದಂ, ಎಸ್.ಎಂ.ಕುಲಕರ್ಣಿ, ಎ.ಎಸ್.ಪಾಟೀಲ, ಆರ್.ಆರ್.ತೆಲಸಂಗ, ನೂರಅಹ್ಮದ್ ಡೊಂಗರಗಾAವ, ಶಿವಾನಂದ ಸಿಂಧೂರ, ದುಂಡಪ್ಪ ದೊಡಮನಿ, ಶಕುಂತಲಾ ಪಾಟೀಲ, ಸಂಗೀತಾ ತೆಲಸಂಗ, ಅಪ್ಪು ಮಾಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net