ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲಿ

ಕಬ್ಬೂರಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಅರವಿಂದ ದೇಶಪಾಂಡೆ, ಕಿರಣ ರಾಮಜಿ, ಬಸವಪ್ರಸಾದ ಜೊಲ್ಲೆ ಇತರರಿದ್ದರು.
ಕಬ್ಬೂರಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಅರವಿಂದ ದೇಶಪಾಂಡೆ, ಕಿರಣ ರಾಮಜಿ, ಬಸವಪ್ರಸಾದ ಜೊಲ್ಲೆ ಇತರರಿದ್ದರು.
Published on
ಕಬ್ಬೂರ: ಡಿಜಿಟಲ್‌ನಿಂದಾಗಿ ಮಕ್ಕಳು ಸನಾತನ ಧರ್ಮ ಮರೆಯುವಂತಾಗಿದೆ. ಹಾಗಾಗಿ ಪಾಲಕರು ಮಕ್ಕಳಿಗೆ ಸಂಸ್ಕಾರ, ಆಚಾರ ವಿಚಾರ ಬಗ್ಗೆ ಕಲಿಸಬೇಕು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದರು. ಗೌರಿಶಂಕರ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮತನಾಡಿ, ಜಾತಿ, ಭೇದ ಬಿಟ್ಟು ಎಲ್ಲರೂ ಭಾರತೀಯರಾಗಿ ಜೀವನ ಸಾಗಿಸಬೇಕು ಎಂದರು.
ಆರ್‌ಎಸ್‌ಎಸ್ ವಕ್ತಾರ ಅರವಿಂದ ದೇಶಪಾಂಡೆ ಮಾತನಾಡಿ, ದೇಶ ರಕ್ಷಣೆಗೆ ಕಂಕಣಬದ್ಧರಾಬೇಕು ಎಂದು ಹೇಳಿದರು.
ಕುಂಭೋತ್ಸವ ಹಾಗೂ ಭವ್ಯ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಸಂಚರಿಸಿತು. ವಕ್ತಾರ ಕಿರಣ ರಾಮಜಿ, ಮುಖಂಡರಾದ ಸುರೇಶ ಬೆಲ್ಲದ, ಬಸವಪ್ರಸಾದ ಜೊಲ್ಲೆ, ಮಹೇಶ ಭಾತೆ, ವಿಜಯ ಕೋಠಿವಾಲೆ, ಮಹಾಲಿಂಗ ಹಂಜಿ, ದುಂಡಪ್ಪ ಬೆಂಢವಾಡೆ, ಡಾ.ಆರ್.ಕೆ.ಬಾಗಿ, ಮಲ್ಲೇಶ ಹನುಮಂತಗೋಳ, ಹನುಮಂತ ಕರಿಕಟ್ಟಿ, ಸಿದ್ದು ಖಿಂಡಿ, ಲಕ್ಷ್ಮಣ ಪೂಜೇರಿ, ಮುರಿಗೆಪ್ಪ ಅರಕೇರಿ, ಎಂ.ಎಸ್.ಈಟಿ, ಎಂ.ಬಿ.ಆಲೂರೆ, ಕಲ್ಲಪ್ಪ ಕರಗಾವಿ, ಮಹಾಂತೇಶ ಶಿರಗೂರ, ರಮೇಶ ಕಾಳನ್ನವರ, ಎಸ್.ಕೆ.ಕಾಮಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net