ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿಸಿ

ಐಗಳಿ ಕ್ರಾಸ್‌ನಲ್ಲಿರುವ ವೈಭವ ಲಕ್ಷ್ಮಿದೇವಿ ಮಹಾಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ದಾನಿಗಳಾದ ಶ್ರೀಧರ ಹಾಗೂ ವಿಜಯಕುಮಾರ ಅವತಾಡೆ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಐಗಳಿ ಕ್ರಾಸ್‌ನಲ್ಲಿರುವ ವೈಭವ ಲಕ್ಷ್ಮಿದೇವಿ ಮಹಾಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ದಾನಿಗಳಾದ ಶ್ರೀಧರ ಹಾಗೂ ವಿಜಯಕುಮಾರ ಅವತಾಡೆ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
Published on
ಐಗಳಿ: ಮಕ್ಕಳನ್ನು ದೇಶ ಕಾಯುವ ಸೈನಿಕ ಅಥವಾ ದೇಶಕ್ಕೆ ಅನ್ನ ನೀಡುವ ಕೃಷಿಕನ್ನಾಗಿ ಮಾಡಿ ಎಂದು ನಾಗರಾಳದ ಜ್ಞಾನೇಶ್ವರ ಸ್ವಾಮೀಜಿ ಹೇಳಿದರು.
ಐಗಳಿ ಕ್ರಾಸ್‌ನಲ್ಲಿ ಈಚೆಗೆ ವೈಭವ ಲಕ್ಷ್ಮಿ ದೇವಾಲಯದ ಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಹಿರಿಯರನ್ನು ಗೌರವಿಸುವ, ನಿಸರ್ಗ ಪ್ರೀತಿಸುವ ಮತ್ತು ರಕ್ಷಿಸುವ ಕುರಿತು ಪಾಠ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.
ಅಡಹಳಟ್ಟಿ ಮಲ್ಲಿಕಾರ್ಜುನ ಶರಣರು ಮಾತನಾಡಿ, ವೈಭವ ಲಕ್ಷ್ಮಿ ದೇವಾಲಯಕ್ಕೆ ಮಂಟಪದ ನಿರ್ಮಿಸಿದ್ದು ಶ್ಲಾಘನೀಯ ಎಂದರು.
ಬಬಲಾದಿ ಮಠದ ಭೀಮಾಶಂಕರ ಶರಣರು, ವಿಜಯಪುರ ಭೀಮಾಶಂಕರ ಶರಣರು, ಅಪ್ಪಾಸಾಹೇಬ ಶರಣರು, ಸಹದೇವ ಶರಣರು ಆಶೀರ್ವಚನ ನೀಡಿದರು.
ಕೆ.ಎಸ್.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾನಿಗಳಾದ ಎಸ್‌ಎನ್‌ಸಿ ಕಂಪನಿಯ ಶ್ರೀಧರ ಹಾಗೂ ತೆಲಸಂಗದ ವಿಜಯಕುಮಾರ ಅವತಾಡೆ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಅರ್ಚಕ ಅಡಿವೆಪ್ಪ ಶರಣರು, ಅಪ್ಪಾಸಾಹೇಬ ಪಾಟೀಲ, ತಾಪಂ ಮಾಜಿ ಸದಸ್ಯ ಸದಾಶಿವ ಹರಪಾಳೆ, ಡಾ.ಸೋಮನಿಂಗ ಬಿರಾದಾರ, ಶಂಕ್ರೆಪ್ಪ ಗಬ್ಬೂರ, ದಯಾನಂದ ಮಾಳಿ, ಶಶಿಕಾಂತ ಘಾಟಗೆ, ಮನೋಹರ ಬೆಳಗಲಿ, ಚೇತನ, ಅಭಿಜಿತ್, ಸದಾನಂದ ಮಾಡಿಗ್ಯಾಳ, ಮಲಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net