ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ

ಸವದತ್ತಿಯ ಕನ್ನಡ ಸರ್ಕಾರಿ ಹೆಣ್ಣು ಮಕ್ಕಳ ನಂ.5ರ ಶಾಲೆ ನೂತನ ಕೊಠಡಿಗಳ ಭೂಮಿಪೂಜೆಯನ್ನು ಶಾಸಕ ವಿಶ್ವಾಸ ವೈದ್ಯ ನೆರವೇರಿಸಿದರು. ಬಿಇಒ ಅಕ್ಬರ್‌ಅಲಿ ಖಾಜಿ, ಶಂಕರ ಇಜಂತಕರ, ಎಸ್.ವೈ.ಉಪ್ಪಾರ, ಗಿರೀಶ ಮುನೋಳಿ ಇತರರಿದ್ದರು.
ಸವದತ್ತಿಯ ಕನ್ನಡ ಸರ್ಕಾರಿ ಹೆಣ್ಣು ಮಕ್ಕಳ ನಂ.5ರ ಶಾಲೆ ನೂತನ ಕೊಠಡಿಗಳ ಭೂಮಿಪೂಜೆಯನ್ನು ಶಾಸಕ ವಿಶ್ವಾಸ ವೈದ್ಯ ನೆರವೇರಿಸಿದರು. ಬಿಇಒ ಅಕ್ಬರ್‌ಅಲಿ ಖಾಜಿ, ಶಂಕರ ಇಜಂತಕರ, ಎಸ್.ವೈ.ಉಪ್ಪಾರ, ಗಿರೀಶ ಮುನೋಳಿ ಇತರರಿದ್ದರು.
Published on
ಸವದತ್ತಿ: ಸಮಾಜದಲ್ಲಿ ಸರ್ವತೋಮುಖ ಬೆಳವಣಿಗೆ ಹೊಂದಲು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯವಶ್ಯವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಶಾಲೆ ನಂ.5ರಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ಮೂರು ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸದ್ಯ ಶಾಲೆಯಲ್ಲಿ ಏಳನೇ ತರಗತಿ ವರೆಗೆ ತರಗತಿಗಳು ಇದ್ದು, ಮುಂದಿನ ದಿನಗಳಲ್ಲಿ ಎಂಟನೇ ತರಗತಿ ಆರಂಭಿಸಲು ಪ್ರಯತ್ನಿಸಲಾಗುವುದು. ಹೆಣ್ಣು ಮಕ್ಕಳು ಶಿಕ್ಷಣವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಕ್ಬರ್‌ಅಲಿ ಖಾಜಿ, ಮುಖ್ಯ ಶಿಕ್ಷಕ ಎಸ್.ವೈ.ಉಪ್ಪಾರ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಇಜಂತಕರ, ಎ್.ವೈ.ಗಾಜಿ, ಬಸವರಾಜ ಗುರನ್ನವರ, ಚಂದ್ರಣ್ಣ ಶಾಮರಾಯನವರ, ಗಿರೀಶ ಮುನೋಳಿ, ರವಿ ನಲವಡೆ, ರಮೇಶ ಅಬ್ಚಾರ, ಪ್ರಶಾಂತ ಹಂಪಣ್ಣವರ, ಶಿವಾನಂದ ತೋಟಗಿ, ಹನುಮಂತ ಪೆಟ್ಲೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net