ಬೆಳಗಾವಿ: ತೀವ್ರ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯೊಬ್ಬರ ಪಾದವನ್ನೇ ಛೇಧಿಸಬೇಕಾದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಅಡ್ವಾನ್ಸ್ ಜರ್ಮನ್ ಹೋಮಿಯೋಪಥಿ ಚಿಕಿತ್ಸೆ ಮೂಲಕ ಸೋಂಕು ಗುಣಪಡಿಸಿ, ಪಾದವನ್ನು ಸಂರಕ್ಷಿಸುವಲ್ಲಿ ನಗರದ ಅಡ್ವಾನ್ಸ್ ಜರ್ಮನ್ ಹೋಮಿಯೋಪಥಿ ಆಸ್ಪತ್ರೆ ಯಶಸ್ವಿಯಾಗಿದೆ.
ಆಸ್ಪತ್ರೆ ತಜ್ಞ ವೈದ್ಯ ಡಾ.ಮನೋಜ ಪೂಜಾರ ಮಾಹಿತಿ ನೀಡಿದ್ದು, ಪಾದದಲ್ಲಿನ ಗಾಯ ಉಲ್ಬಣಗೊಂಡು, ಕೀವು ತುಂಬಿತ್ತು. ಔಷಧ ಅಥವಾ ಚಿಕಿತ್ಸೆಯಿಂದ ಗುಣಪಡಿಸಲು ಅಸಾಧ್ಯ ಎಂದು ವೈದ್ಯರು ರೋಗಿಗೆ ತಿಳಿಸಿದ್ದರು. ಹೀಗಾಗಿ, ತಕ್ಷಣ ಶಸಚಿಕಿತ್ಸೆಯಿಂದ ಸೋಂಕು ಪೀಡಿತ ಪಾದದ ಭಾಗವನ್ನು ತೆಗೆದುಹಾಕುವುದು ಅನಿವಾರ್ಯ.
ಇಲ್ಲದಿದ್ದರೆ ಪೂರ್ಣ ಕಾಲನ್ನೇ ತೆಗೆದುಹಾಕುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಗೆ ನೀಡಿದ್ದರು. ಇಂತಹ ಸ್ಥಿತಿಯಲ್ಲಿ ನಮ್ಮಲ್ಲಿ ಬಂದ ರೋಗಿಗೆ ನಾಲ್ಕು ತಿಂಗಳ ಕಾಲ ಅಡ್ವಾನ್ಸ್ ಜರ್ಮನ್ ಹೋಮಿಯೋಪಥಿ ಚಿಕಿತ್ಸೆ ನೀಡಲಾಗಿತ್ತು.
ಪರಿಣಾಮ ಫೆ.10ರಂದು ರೋಗಿ ಸಂಪೂರ್ಣ ಗುಣಮುಖರಾಗಿದ್ದು, ಮುಂದಿನ ದಿನಗಳಲ್ಲಿ ಈ ವ್ಯಕ್ತಿ ಎಂದಿನಂತೆ ಜೀವನ ಸಾಗಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ರೋಗಿ ಮತ್ತು ಅವರ ಕುಟುಂಬಸ್ಥರು ವೈದ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.