ರಸ್ತೆ ಸುರಕ್ಷತೆ ನಿಯಮ ಪಾಲಿಸಲಿ

ಸತ್ತಿ ಗ್ರಾಮದ ಪಾಟೀಲ ಪಬ್ಲಿಕ್ ಶಾಲೆಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಕ್ಕೆ ಆರ್‌ಟಿಒ ಕಚೇರಿಯ ಹಿರಿಯ ವಾಹನ ನಿರೀಕ್ಷಕ ಶಿವಾನಂದ ಗುಡ್ಡೋಡಗಿ ಚಾಲನೆ ನೀಡಿದರು. ಸುನೀಲಕುಮಾರ ಉಮರಾಣಿ, ಸಿದ್ದು ಹಂಡಗಿ, ಚೇತನಾ ಪಾಟೀಲ, ಡಾ.ಶ್ರೀಶೈಲ ಚೌಗುಲಾ ಇತರರಿದ್ದರು.

Published on
ನಂದೇಶ್ವರ: ಪ್ರತಿಯೊಬ್ಬರು ರಸ್ತೆ ಸುರಕ್ಷತೆ ನಿಯಮ ಪಾಲಿಸಬೇಕು ಎಂದು ಅಥಣಿ ಆರ್‌ಟಿಒ ಕಚೇರಿ ಹಿರಿಯ ವಾಹನ ನಿರೀಕ್ಷಕ ಶಿವಾನಂದ ಗುಡ್ಡೋಡಗಿ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಪಾಟೀಲ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆ, ಬಾಳಕೃಷ್ಣ ಮಹಾರಾಜ ಸಂಸ್ಕೃತ ಪಾಠ ಶಾಲೆ ಹಾಗೂ ಅಥಣಿ ಆರ್‌ಟಿಒ ಕಚೇರಿ ಸಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ರಸ್ತೆ ಸುರಕ್ಷತೆ ಜೀವನ ರಕ್ಷೆ' ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ತಿಳಿವಳಿಕೆ ಹೊಂದಬೇಕು ಎಂದರು.
ಆರ್‌ಟಿಒ ಕಚೇರಿ ಪ್ರಥಮದರ್ಜೆ ಸಹಾಯಕ ಸುನೀಲಕುಮಾರ ಉಮರಾಣಿ ಮಾತನಾಡಿ, ಮಕ್ಕಳು ರಸ್ತೆ ಸುರಕ್ಷತೆಯ ಅರಿವು ಹೊಂದಬೇಕು. ಪಾಲಕರು ದ್ವಿಚಕ್ರ ವಾಹನದ ಮೇಲೆ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತಾ ಬೆಲ್ಟ್ ಹಾಕಿಕೊಳ್ಳಬೇಕು ಎಂದರು.
ವಾಹನ ತರಬೇತಿ ಶಾಲೆ ಮುಖ್ಯಸ್ಥ ಸಿದ್ದು ಹಂಡಗಿ, ಮುಖ್ಯಶಿಕ್ಷಕಿ ಚೇತನಾ ಪಾಟೀಲ, ಡಾ.ಶ್ರೀಶೈಲ ಚೌಗುಲಾ, ಶೇಖರ ಬಿರಾದಾರ, ನೀಲಕಂಠ ಹಂಚಿನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net