ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ

ಕೊಕಟನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ಯುವ ಮುಖಂಡ ಚಿದಾನಂದ ಸವದಿ ಅವರನ್ನು ಸನ್ಮಾನಿಸಲಾಯಿತು. ಶಾಮರಾವ್ ಪೂಜಾರಿ, ಸುಭಾಸ ಸೋನಕರ, ಮಹಾನಿಂಗ ಮಗರ, ಬಾಬಾಸಾಹೇಬ್ ಮುಜಾವರ, ಗೌರೀಶ ಹಿರೇಮಠ, ಈರಪ್ಪ ವಾಲಿ, ಪ್ರವೀಣ ಪಾಟೀಲ ಇತರರಿದ್ದರು.
ಕೊಕಟನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ಯುವ ಮುಖಂಡ ಚಿದಾನಂದ ಸವದಿ ಅವರನ್ನು ಸನ್ಮಾನಿಸಲಾಯಿತು. ಶಾಮರಾವ್ ಪೂಜಾರಿ, ಸುಭಾಸ ಸೋನಕರ, ಮಹಾನಿಂಗ ಮಗರ, ಬಾಬಾಸಾಹೇಬ್ ಮುಜಾವರ, ಗೌರೀಶ ಹಿರೇಮಠ, ಈರಪ್ಪ ವಾಲಿ, ಪ್ರವೀಣ ಪಾಟೀಲ ಇತರರಿದ್ದರು.
Published on
ಅಥಣಿ ಗ್ರಾಮೀಣ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ತಾಲೂಕು ಪಂಚಾಯಿತಿ ವತಿಯಿಂದ 8 ಲಕ್ಷ ರೂ. ಮೊತ್ತದ ಊಟದ ಕೊಠಡಿ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಪಠ್ಯಕ್ಕೆ ಸೀಮಿತಗೊಳ್ಳದೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ನೋಡಿಕೊಳ್ಳಬೇಕು ಎಂದರು.
ಕೆಪಿಸಿಸಿ ಸದಸ್ಯ ಶಾಮರಾವ್ ಪೂಜಾರಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅಭಿವೃದ್ಧಿಯಲ್ಲಿ ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಪಶುವೈದ್ಯಕೀಯ, ಕೇಂದ್ರೀಯ ಮಹಾವಿದ್ಯಾಲಯ, ನೀರಾವರಿ, ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಗತಿ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಜನರ ಆಶಾಕಿರಣರಾಗಿದ್ದಾರೆ ಎಂದರು.
ಮುಖಂಡ ಸುಭಾಷ ಸೋನಕರ ಮಾತನಾಡಿದರು. ಯುವ ಮುಖಂಡ ಚಿದಾನಂದ ಸವದಿ ಅವರನ್ನು ಸನ್ಮಾನಿಸಲಾಯಿತು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಹಾನಿಂಗ ಮಗರ, ಮಹಾದೇವ ಚವ್ಹಾಣ, ಸೋಮೇಶ ಜೋಶಿ, ಚಿದಾನಂದ ಭಜಂತ್ರಿ, ಸುರೇಶ ಪೂಜಾರಿ, ಅಪ್ಪು ನಾಯಿಕ, ಗುಳಪ್ಪ ಪೂಜಾರಿ, ರಾಜು ಗಡಕರ, ಶಂಕರ ಹಿರೇಕುರಬರ, ಜಾವೇದ್ ನದ್ಾ, ಮುಖ್ಯಶಿಕ್ಷಕ ಬಾಬಾಸಾಹೇಬ್ ಮುಜಾವರ, ಗೌರೀಶ ಹಿರೇಮಠ, ಅಧಿಕಾರಿಗಳಾದ ಈರಪ್ಪ ವಾಲಿ, ಪ್ರವೀಣ ಪಾಟೀಲ, ಅರವಿಂದ ಬೇವಿನಗಿಡದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net