ವೈಷಮ್ಯ ಹಿನ್ನೆಲೆಯಲ್ಲಿ ಓರ್ವನ ಕೊಲೆ

murder
murder
Published on
ಬೆಳಗಾವಿ: ಹಳೇ ವೈಷಮ್ಯ ಹಿನ್ನೆಲೆ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ಸಂಗನಗೌಡ ಬಸನಗೌಡ ಪಾಟೀಲ (50) ಸೋಮ ವಾರ ರಾತ್ರಿ ಕೊಲೆಗೀಡಾಗಿದ್ದಾರೆ.
ಗ್ರಾಮದ ಸಿದ್ಧೇಶ್ವರ ಜಾತ್ರೆ ಮೆರವಣಿಗೆ ಸಂದರ್ಭದಲ್ಲಿ ಸಂಗನಗೌಡ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆದಿದ್ದು, ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಕರಣ ಕುರಿತು 16 ಜನರ ವಿರುದ್ಧ ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net