ಮೂಲಸೌಕರ್ಯ ಒದಗಿಸಲು ಪ್ರಯತ್ನ

ಬೋರಗಾಂವ ಪಪಂ ವತಿಯಿಂದ ಫಲಾನುಭವಿಗಳಿಗೆ ಯುವ ಮುಖಂಡ ಉತ್ತಮ ಪಾಟೀಲ ಹೊಲಿಗೆ ಯಂತ್ರ ವಿತರಿಸಿದರು. ಪಿಂಟು ಕಾಂಬಳೆ, ಭಾರತಿ ವಸವಾಡೆ, ಪ್ರದೀಪ ಮಾಳಿ, ಅಭಯಕುಮಾರ ಮಗದುಮ್ ಇತರರಿದ್ದರು.
ಬೋರಗಾಂವ ಪಪಂ ವತಿಯಿಂದ ಫಲಾನುಭವಿಗಳಿಗೆ ಯುವ ಮುಖಂಡ ಉತ್ತಮ ಪಾಟೀಲ ಹೊಲಿಗೆ ಯಂತ್ರ ವಿತರಿಸಿದರು. ಪಿಂಟು ಕಾಂಬಳೆ, ಭಾರತಿ ವಸವಾಡೆ, ಪ್ರದೀಪ ಮಾಳಿ, ಅಭಯಕುಮಾರ ಮಗದುಮ್ ಇತರರಿದ್ದರು.
Published on
ಬೋರಗಾಂವ: ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರ ಜತೆಗೂಡಿ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಫಲಾನುಭವಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ, ಪಟ್ಟಣದ ನಾಗರಿಕರಿಗೆ ಉಚಿತ ಗ್ಯಾಸ್, ಹೊಲಿಗೆ ಯಂತ್ರ, ಅಂಗವಿಕಲರಿಗೆ ತ್ರಿಚಕ್ರ ವಾಹನ ಸೇರಿ ಮೂಲಸೌಕರ್ಯ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಪಪಂ ಸದಸ್ಯ ಅಭಯಕುಮಾರ ಮಗದುಮ್ ಮಾತನಾಡಿ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ವಸವಾಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಸದಸ್ಯರಾದ ಶೋಭಾ ಹವಲೆ, ಮಾಣಿಕ ಕುಂಬಾರ, ತುಳಸಿದಾಸ ವಾಸವಾಡೆ, ದಿಗಂಬರ ಕಾಂಬ್ಳೆ, ಅಶ್ವಿನಿ ಪವಾರ, ವರ್ಷಾ ಮಂಗುಟೆ, ಗಿರಿಜಾ ವಠಾರೆ, ಸುವರ್ಣಾ ಸೋಬಾನೆ, ಸಂಗೀತಾ ಶಿಂಗೆ, ಜಾವೇದ ಮಕಾಂದರ, ರುಕ್ಸಾನಾ ಅಫ್ರಾಜ್, ಅಮರ ಶಿಂಗೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net