ಆಯುರ್ವೇದ ಜಾಗೃತಿಗೆ ಶ್ರಮ

ಚಿಕ್ಕೋಡಿಗೆ ಆಗಮಿಸಿದ ಆಯುರ್ವೇದ ರಥಯಾತ್ರೆಯನ್ನು ಡಾ.ಕಿರಣ ಮುತ್ನಾಳಿ ಬರಮಾಡಿಕೊಂಡರು. ಡಾ.ಸೂರಜ ಕುಂಬಾರ ಇತರರಿದ್ದರು.
ಚಿಕ್ಕೋಡಿಗೆ ಆಗಮಿಸಿದ ಆಯುರ್ವೇದ ರಥಯಾತ್ರೆಯನ್ನು ಡಾ.ಕಿರಣ ಮುತ್ನಾಳಿ ಬರಮಾಡಿಕೊಂಡರು. ಡಾ.ಸೂರಜ ಕುಂಬಾರ ಇತರರಿದ್ದರು.
Published on
ಚಿಕ್ಕೋಡಿ: ಬೆಂಗಳೂರಿನಲ್ಲಿ ಜರುಗುವ ೨ನೇ ವಿಶ್ವ ಆಯುರ್ವೇದ ಸಮ್ಮೇಳನದ ಆಯುರ್ವೇದ ರಥಯಾತ್ರೆಯು ದಕ್ಷಿಣ ಭಾರತದ ೭ ರಾಜ್ಯಗಳಲ್ಲಿ ಸಂಚರಿಸಿ ಆಯುರ್ವೇದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು ಸ್ಥಳೀಯ ಕೆಎಲ್‌ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಕಿರಣ ಮುತ್ನಾಳಿ ಹೇಳಿದರು.
ಪಟ್ಟಣದ ಕೆಎಲ್‌ಇ ಆಯುರ್ವೇದಿಕ್ ಕಾಲೇಜಿನ ಬಳಿ ಮಂಗಳವಾರ ಆಗಮಿಸಿದ ಆಯುರ್ವೇದ ರಥಯಾತ್ರೆ ಸ್ವಾಗತಿಸಿ ಮಾತನಾಡಿದರು. ೨೩ ವರ್ಷದ ಬಳಿಕ ಡಿ.೨೫ರಿಂದ ೨೮ರ ವರೆಗೆ ನಡೆಯುವ ೨ನೇ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ೬೦ ವೈಶಿಷ್ಟ್ಯಗಳ ಕುರಿತು ೬೦೦೦ ಪ್ರತಿನಿಽಗಳು ಮಾತನಾಡಲಿದ್ದಾರೆ. ವಿವಿಧ ರೋಗಗಳ ಚಿಕಿತ್ಸೆ ಅನುಕೂಲ ಕುರಿತು ಅಭಿಪ್ರಾಯ ಮಂಡಿಸಲಿದ್ದಾರೆ. ಸಂವಾದ, ಗೋಷ್ಠಿ ಹಾಗೂ ತಾಂತ್ರಿಕ ತರಬೇತಿ ಕಾರ್ಯಾಗಾರ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ರಥಯಾತ್ರೆ ಸಂಯೋಜಕ ಡಾ.ಚಂದು ಮೇಟಿ ಮಾತನಾಡಿದರು. ಡಾ.ಸೂರಜ ಕುಂಬಾರ, ಡಾ.ಸುಧೀಂದ್ರ ಹೊನವಾಡ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net