ಶಿಕ್ಷಣದಿಂದ ದೌರ್ಜನ್ಯ ದೂರ

ಕೊಕಟನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ 11ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಈರಣ್ಣ ಇ.ಎಸ್. ಮಾತನಾಡಿದರು. ಪ್ರವೀಣ ಕಾಂಬಳೆ, ಸುನೀಲ ಪಾಟಣಕರ ಇತರರಿದ್ದರು.
ಕೊಕಟನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ 11ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಈರಣ್ಣ ಇ.ಎಸ್. ಮಾತನಾಡಿದರು. ಪ್ರವೀಣ ಕಾಂಬಳೆ, ಸುನೀಲ ಪಾಟಣಕರ ಇತರರಿದ್ದರು.
Published on
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ನಿಷೇಧ ಕಾಯ್ದೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿ ಜನರು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಲ್ಲಿ ಹಿಂದೆ ಇದ್ದಾರೆ. ಮಕ್ಕಳ ಸಂರಕ್ಷಣೆಯಲ್ಲಿ ಎಲ್ಲರ ಪಾತ್ರ ಬಹು ಮುಖ್ಯವಾಗಿದೆ. ಬಾಲ್ಯವಿವಾಹ ಕಂಡುಬಂದಲ್ಲಿ ಪೊಲೀಸರಿಗೆ ಅಥವಾ 1098ಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು ಎಂದರು.
ವಕೀಲರಾದ ಪ್ರವೀಣ ಕಾಂಬಳೆ ಮಾತನಾಡಿ, ಪ್ರತಿಯೊಬ್ಬರೂ ಹಕ್ಕು ಮತ್ತು ಕಾನೂನು ಅರಿವು ಹೊಂದಬೇಕು ಎಂದು ತಿಳಿಸಿದರು.
ವಕೀಲ ಸುನೀಲ ಪಾಟಣಕರ ಮಾತನಾಡಿ, ಮಕ್ಕಳ ಪೋಷಣೆಯಲ್ಲಿ ಪಾಲಕರ ಪಾತ್ರ ಪ್ರಮುಖವಾಗಿದೆ ಎಂದರು. ಬಳಿಕ ಮಕ್ಕಳೊಂದಿಗೆ ಸಂವಾದ ನಡೆಯಿತು.
ವಕೀಲೆ ಅಕ್ಷತಾ ಶಿಂಗೆ, ಉಪ ಪ್ರಾಚಾರ್ಯ ಅನಿಲ ಮೇಲಿನಕೇರಿ ಮಾತನಾಡಿದರು, ಆಶಾ ಈರಣ್ಣ, ವಕೀಲ ಪವನ ಶೇಡಬಾಳ, ಮೇಲ್ವಿಚಾರಕಿ ಜಿ.ಬಿ.ಗಂಗಪ್ಪನವರ, ಧರೆಪ್ಪ ನೇಮಗೌಡ, ಸಂಜಯ ಲಮಾಣಿ, ಹೇಮಾ ಆದೆಪ್ಪನವರ, ಸರಳಾ ಕುಲಕರ್ಣಿ, ಅನಿತಾ ಕಾಂಬಳೆ, ಪ್ರೇಮಾ ನಾಯಿಕ, ಪೂಜಾ ಕಂಬಾರ, ರೇಣುಕಾ ದಾಶಾಳ, ಕಿರಣ ನಾಯಿಕ, ಶಿಲ್ಪಾ ನಾಟೆಕಾರ, ಅರ್ಪಿತಾ ದಡ್ಡಿ, ಸಂತೋಷ ತಳಕೇರಿ, ರಾಜು ಕಾಂಬಳೆ, ಆರತಿ ಪಾಟೀಲ, ಅಬ್ದುಲ್ ಹಮೀದ್, ಮೀನಾಕ್ಷಿ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net