ವಿದ್ಯಾರ್ಜನೆ ಬದುಕಿನ ಶ್ರೇಷ್ಠ ಹೆಜ್ಜೆ

ತೆಲಸಂಗ ಗ್ರಾಮದ ಸರ್ಕಾರಿ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು. ಶಿವಾನಂದ ಪೂಜಾರಿ, ಎ.ಕೆ.ಕಾಂಬಳೆ, ಪಿ.ಎ.ಹೆಗಡೆ ಇತರರಿದ್ದರು.
ತೆಲಸಂಗ ಗ್ರಾಮದ ಸರ್ಕಾರಿ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು. ಶಿವಾನಂದ ಪೂಜಾರಿ, ಎ.ಕೆ.ಕಾಂಬಳೆ, ಪಿ.ಎ.ಹೆಗಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಾನಂದ ಪೂಜಾರಿ ಅನಿಸಿಕೆ
  • ಬೀಳ್ಕೊಡುಗೆ ಸಮಾರಂಭ
ತೆಲಸಂಗ: ಶಿಕ್ಷಣವೆಂದರೆ ಕೇವಲ ಸರ್ಕಾರಿ ನೌಕರಿ ಪಡೆಯುವುದಲ್ಲ. ಅದು ಜ್ಞಾನ ಮತ್ತು ಬದುಕಿನ ಶ್ರೇಷ್ಠ ಹೆಜ್ಜೆಯಾಗಿದೆ ಎಂಬುದನ್ನು ಪಾಲಕರು ಅರಿಯಬೇಕಿದೆ ಎಂದು ಮುಖ್ಯಶಿಕ್ಷಕ ಶಿವಾನಂದ ಪೂಜಾರಿ ಹೇಳಿದರು.
ಗ್ರಾಮದ ಸರ್ಕಾರಿ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ೮ನೇ ತರಗತಿ ವಿದ್ಯಾರ್ಥಿಗಳ
ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಸಿಗುವ ಶಿಕ್ಷಣ ಬದುಕಿನ ಸವಾಲು ಎದುರಿಸುವ ಶಕ್ತಿ ನೀಡುತ್ತದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಓದದೆ, ಮಾನವೀಯ ಮೌಲ್ಯ ರೂಢಿಸಿಕೊಳ್ಳಬೇಕು. ಹೆತ್ತವರು ಹಾಗೂ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವೇ ನಿಜವಾದ ಶಿಕ್ಷಣ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಕರಾದ ಎ.ಕೆ.ಕಾಂಬಳೆ, ಪಿ.ಎ.ಹೆಗಡೆ, ಎ.ಜೆ.ಕೋಳಿ, ಎಸ್.ಪಿ.ಹಡಪದ, ಎ.ಎಂ.ಮಸಬನಾಳ, ವಿ.ಬಿ.ಪತ್ತಾರ, ಮೇಘಾ ಗುಡದಿನ್ನಿ, ಮಹಾದೇವಿ ಖ್ಯಾಡಿ, ಡಿ.ಎಂ.ಕೋಟ್ಯಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net