ಚಿಕ್ಕೋಡಿ: ಇಲ್ಲಿನ ಉಪ ವಿಭಾಗಾಧಿಕಾರಿಗಳ ಸಭಾಭವನದಲ್ಲಿ ಜ.10ರಂದು ಬೆಳಗ್ಗೆ 10.30ಕ್ಕೆ ಇ-ಸ್ಟಾೃಂಪ್ ಪೇಪರ್ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ದಸ್ತಾವೇಜು ಬರಹಗಾರರು, ವಕೀಲರು, ಇ-ಸ್ಟಾೃಂಪ್ ಪೇಪರ್ ಮಾರಾಟಗಾರರು, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರದ ಸಿಬ್ಬಂದಿಗೆ ಹಾಗೂ ಇ-ಸ್ಟಾೃಂಪ್ ವ್ಯವಸ್ಥೆಯಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಉಪ ನೋಂದಣಾಧಿಕಾರಿ ತಿಳಿಸಿದ್ದಾರೆ.