ಶಾಲೆಗಳಿಗೂ ಪ್ರವೇಶಿಸಿದೆ ಡ್ರಗ್ಸ್​

ಬೆಳಗಾವಿಯಲ್ಲಿ ಶನಿವಾರ ನಶೆಮುಕ್ತ ಅಭಿಯಾನ ಪ್ರಯುಕ್ತ ಹಮ್ಮಿಕೊಂಡಿದ್ದ ವಾಕ್​ಥಾನ್​ಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಭಗವಾನ ಬಿ.ಸಿ., ಮೊಹಮ್ಮದ್​ ರೋಷನ್​, ಲಕ್ಷ$್ಮಣರಾವ ಚಿಂಗಳೆ ಇತರರಿದ್ದರು.
ಬೆಳಗಾವಿಯಲ್ಲಿ ಶನಿವಾರ ನಶೆಮುಕ್ತ ಅಭಿಯಾನ ಪ್ರಯುಕ್ತ ಹಮ್ಮಿಕೊಂಡಿದ್ದ ವಾಕ್​ಥಾನ್​ಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಭಗವಾನ ಬಿ.ಸಿ., ಮೊಹಮ್ಮದ್​ ರೋಷನ್​, ಲಕ್ಷ$್ಮಣರಾವ ಚಿಂಗಳೆ ಇತರರಿದ್ದರು.
Published on
ಬೆಳಗಾವಿ: ಮಾದಕ ವಸ್ತುಗಳು ಶಾಲೆಗಳಿಗೂ ಪ್ರವೇಶಿಸಿದ್ದು, ವಿದ್ಯಾರ್ಥಿಗಳೂ ವ್ಯಸನಿಗಳಾಗುತ್ತಿದ್ದಾರೆ. ಸರ್ಕಾರ, ಪೊಲೀಸರ ಜತೆಗೆ ಜನರು ಕೈಜೋಡಿಸಿದರೆ ಮಕ್ಕಳನ್ನಷ್ಟೇ ಅಲ್ಲದೆ, ರಾಜ್ಯವನ್ನೇ ಡ್ರಗ್ಸ್​ ಮಾಫಿಯಾದಿಂದ ಕಾಪಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಜೀವ ಗಾಂಧಿ ಆರೋಗ್ಯ ವಿಾನಗಳ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಸಂ, ರಾಜೀವ ಗಾಂಧಿ ಆರೋಗ್ಯ ವಿಾನಗಳ ವಿವಿ, ದಿಶಾಬೋಧ ಫೌಂಡೇಷನ್​ ಮತ್ತು ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋ ಸಹಯೋಗದಲ್ಲಿ ಸ್ವಾಸ್ಥ$್ಯ ಭಾರತ ಶ್ರೇಷ್ಠ ಭಾರತ ಹಾಗೂ ನಶೆಮುಕ್ತ ಭಾರತ, ನಶೆಮುಕ್ತ ಕರ್ನಾಟಕ, ನಶೆಮುಕ್ತ ಕ್ಯಾಂಪಸ್​ ಹಾಗೂ ಅಂಗದಾನ ಜಾಗೃತಿ ಅಭಿಯಾನದ ಪ್ರಯುಕ್ತ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಾಕ್​ಥಾನ್​ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಚಟವಗಾಲಿ ಎಂಬ ಕಾರಣಕ್ಕೆ ತಿನ್ನುವ ಪದಾರ್ಥಗಳಲ್ಲೂ ನಶೆ ವಸ್ತು ಸೇರಿಸುತ್ತಿದ್ದಾರೆ. ಮೆಕ್ಸಿಕೋದಂತಹ ದೇಶದಲ್ಲಿ ಸರ್ಕಾರ ಮತ್ತು ಡ್ರಗ್ಸ್​ ಮಾಫಿಯಾ ಮಧ್ಯೆಯೇ ಸಮರ ನಡೆದಿದೆ. ಇಡೀ ಜಗತ್ತಿನ ಹಳ್ಳಿ ಹಳ್ಳಿಗೆ ಡ್ರಗ್ಸ್​ ತಲುಪಿಸುವಷ್ಟರ ಮಟ್ಟಿಗೆ ಈ ಜಾಲ ಬೆಳೆದಿದ್ದು, ನಶೆಮುಕ್ತ ಮನೆಗೆ ಕಂಕಣಬದ್ಧಾರಗಬೇಕು ಎಂದು ಹೇಳಿದರು.
ರಾಜೀವ ಗಾಂಧಿ ವಿವಿ ಕುಲಪತಿ ಡಾ.ಭಗವಾನ ಬಿ.ಸಿ.ಮಾತನಾಡಿ, ಉತ್ತರದ ರಾಜ್ಯಗಳ ನಂತರ ಡ್ರಗ್​ ಪೆಡ್ಲರ್​ಗಳ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ದೇಶಾದ್ಯಂತ ಶೇ.30ರಷ್ಟಿದ್ದ ಮಾದಕ ವ್ಯಸನದ ವಿದ್ಯಾರ್ಥಿಗಳ ಪ್ರಮಾಣ ಶೇ.63ಕ್ಕೆ ಏರಿದೆ. ಇದರ ವಿರುದ್ಧ ಸಮರ ಸಾರಬೇಕು ಎಂದು ಕರೆ ನೀಡಿದರು.
ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಆಸೀಫ್​ ಸೇಠ್​, ಮಾಜಿ ಶಾಸಕ ಶ್ಯಾಮ ಘಾಟಗೆ, ಬುಡಾ ಅಧ್ಯಕ್ಷ ಲಕ್ಷ$್ಮಣರಾವ್​ ಚಿಂಗಳೆ, ದಿಶಾಬೋಧ ಫೌಂಡೇಷನ್​ನ ಕಾಂತಿ ಶೆಟ್ಟಿ, ಎ.ಡಿ.ಧ್ರುವಕುಮಾರ, ಡಾ.ಸಂದೀಪ ಪಟ್ಟಣಶೆಟ್ಟಿ, ಡಾ. ವಿಜಯಕುಮಾರ ಲಮಾಣಿ, ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋದ ವಿಕಾಸ ಸಿಂಗ್​, ಬಿಮ್ಸ್​ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ, ಪಾಲಿಕೆ ಆಯುಕ್ತ ಎಂ.ಕಾರ್ತಿಕ, ಡಾ.ರವಿ ಪಾಟೀಲ ಇತರರಿದ್ದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ವಾಕ್​ಥಾನ್​ ವಿವಿಧ ವೃತ್ತಗಳ ಮೂಲಕ ಸರ್ದಾರ್ಸ್​ ಮೈದಾನದಲ್ಲಿ ಸಮಾರೋಪಗೊಂಡಿತು. 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

700 ಕೆಜಿ ಗಾಂಜಾ ಜಪ್ತಿ

ಬೆಳಗಾವಿ ಜಿಲ್ಲೆಯಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ವಿರುದ್ಧ ಪೊಲೀಸರು ಸಾಕಷ್ಟು ಕಡಿವಾಣ ಹಾಕಿದ್ದಾರೆ. ಆರು ತಿಂಗಳಿನಲ್ಲಿ 700 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net